ಬೆಂಗಳೂರು(ಅ.4): ದೇಶದ ವಾಯುಸೇನೆ ಅಕ್ಟೋಬರ್ 8ರಂದು 84ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂಬಂಧ ವಾಯು ಸೇನೆಗೆ ಬೆನ್ನುಲು ಬಾಗಿರುವ ಬೆಂಗಳೂರಿನ ಭಾರತೀಯ ವಾಯು ಪಡೆಯು ಏರ್‌ಕ್ರ್‌ಟಾ ಆ್ಯಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್(ಎಎಸ್‌ಟಿಇ) ಇನ್ನಷ್ಟು ಯುದ್ಧ ವಿಮಾನಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದೆ ಎಂದು ಬೆಂಗಳೂರಿನಲ್ಲಿರುವ ಎಎಸ್‌ಟಿಇ ಕಮಾಂಡರ್ ಸಂದೀಪ್ ಸಿಂಗ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1972ರಲ್ಲಿ ಸ್ಥಾಪನೆಯಾದ ಎಎಸ್‌ಇಟಿಇ ಭಾರತೀಯ ಸಶಸ ಪಡೆಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್), ಡಿಆರ್‌ಡಿಓ ಹಾಗೂ ಇಸ್ರೋದ ಅಗತ್ಯಗಳಿಗನುಗುಣವಾಗಿ ಪ್ರಾಥಮಿಕ ಮೂರು ಪ್ರಕಾರಗಳಲ್ಲಿ ವಿಮಾನ ಪರೀಕ್ಷಾ ಕಾರ್ಯ ನಡೆಸುತ್ತಿದೆ. ವಿಮಾನಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳುವ ಮೊದಲು ವಿಮಾನಗಳ ಹಾರಾಟ, ಕಾರ್ಯಕ್ಷಮತೆ, ಸಶಾಸಗಳು, ಏವಿಯಾನಿಕ್ಸ್ ವ್ಯವಸ್ಥೆಗಳ ಅಳವಡಿಕೆಗೆ ಸಂಬಂಸಿ ಹಾರಾಟ ಪರೀಕ್ಷೆ ಹಾಗೂ ವಿಮಾನಗಳ ಪ್ರೋಟೋಟೈಪ್ ಮತ್ತು ವ್ಯವಸ್ಥೆಗಳ ದೇಶೀಯ ಅಭಿವೃದ್ಧಿಗೆ ಸಂಬಂಸಿ ಹಾರಾಟ ಪರೀಕ್ಷೆ, ವಿಮಾನಗಳ ಹಾರಾಟ ಪರೀಕ್ಷೆಯ ಜತೆಗೆ ಇಂತಹ ಪರೀಕ್ಷೆಗಳನ್ನು ನಡೆಸುವ ಸಿಬ್ಬಂದಿಗೂ ತರಬೇತಿಯನ್ನು ಸಂಸ್ಥೆ ನೀಡುತ್ತಿದೆ ಎಂದು ತಿಳಿಸಿದರು.

ಅತ್ಯಾಧುನಿಕ ತರಬೇತಿ ಸಂಸ್ಥೆ

ಇನ್ನು ಭಾರತೀಯ ವಾಯುಪಡೆ ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಸುತ್ತಿದ್ದು, ವಿಶ್ವದ ಆರು ಅತ್ಯಾಧುನಿಕ ತರಬೇತಿ ಶಾಲೆಗಳಲ್ಲಿ ಬೆಂಗಳೂರಿನಲ್ಲಿರುವ ಎಎಸ್‌ಟಿಇ ಕೂಡ ಒಂದು. ಈ ಶಾಲೆ ಪ್ರಯೋಗಾತ್ಮಕ ಪರೀಕ್ಷಾ ಪೈಲಟ್‌ಗಳ ಸೊಸೈಟಿ (ಎಸ್‌ಇಟಿಪಿ) ಹಾಗೂ ಹಾರಾಟ ಪರೀಕ್ಷಾ ಎಂಜಿನಿಯರ್‌ಗಳ ಸೊಸೈಟಿ (ಎಸ್‌ಎ್ಟಿಇ) ಇವುಗಳ ಮಾನ್ಯತೆ ಪಡೆದಿದ್ದು, ಇಲ್ಲಿ ೈಲೆಟ್ ಹಾಗೂ ಎಂಜಿನಿಯರ್‌ಗಳಿಗೆ 46 ವಾರಗಳ ವಿಶೇಷ ತರಬೇತಿ ನೀಡಲಾಗುವುದು. 500ಕ್ಕೂ ಹೆಚ್ಚು ಪೈಲೆಟ್‌ಗಳು ತರಬೇತಿ ಪಡೆದಿದ್ದು, ಎಎಸ್‌ಟಿಇ, ಬೇಸ್ ರಿಪೇರ್ ಡಿಪೊ, ಎಡಿಎ, ಡಿಆರ್‌ಡಿಓ ಹಾಗೂ ಎಚ್‌ಎಎಲ್ ಇತರೆಡೆ ಹಾರಾಟ ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಎಎ್ಟಿಪಿಎಸ್, ಪ್ರೊಡಕ್ಷನ್ ಟೆಸ್ಟ್ ಪೈಲಟ್‌ಗಳು ಹಾಗೂ ರಿಮೋಟೆಡ್ಲಿ ಪೈಲಟೆಡ್ ಏರ್‌ಕ್ರ್‌ಟಾ (ಆರ್‌ಪಿಎ) ಪರೀಕ್ಷಾ ಸಿಬ್ಬಂದಿಗೆ 10 ವಾರಗಳ ತರಬೇತಿ ಕೂಡ ನೀಡಲಾಗುತ್ತದೆ. ಪ್ರತಿ ವರ್ಷ 16ರಿಂದ 18 ಮಂದಿ ಪೈಲೆಟ್‌ಗಳನ್ನು ತಯಾರು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಭಾರತೀಯ ವಾಯುಪಡೆಗಾಗಿ ಪೈಲಟಸ್ ಪಿಸಿ-7 ಬೇಸಿಕ್ ಟ್ರೈನರ್, ಎಎಚ್-64ಡಿ ಅಪಾಚೆ ಸಮರ ಹೆಲಿಕಾಪ್ಟರ್ ಹಾಗೂ ಸಿಎಚ್-47 ಚಿನೂಕ್ ಹೆವಿ ಲ್‌ಟಿ ಹೆಲಿಕಾಪ್ಟರ್‌ಗಳ ಪರೀಕ್ಷೆಯಲ್ಲಿಯೂ ಸಂಸ್ಥೆಯ ಸಿಬ್ಬಂದಿ ತೊಡಗಿದ್ದಾರೆ. ಪ್ರಮುಖವಾಗಿ ಸುಖೋಯಿ-30 ಮಿರಾಜ್, ಎಲ್‌ಸಿಎಲ್ ಸಿಎಚ್‌ಸಿ-130 ಹಾಕ್ ಸಿ-17 ಯುದ್ಧ ವಿಮಾನಗಳ ಸುಧಾರಣೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಅಂತರಿಕ್ಷಯಾನ ಮಾಡಿದ ಮೊದಲ ಭಾರತೀಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಎಎಸ್‌ಟಿಇಯಲ್ಲಿ ತರಬೇತಿ ಪಡೆದು ಇಲ್ಲಿಯೇ ಸೇವೆ ಸಲ್ಲಿಸಿದವರು ಎಂದರು.

ಕಳೆದ 59 ವರ್ಷಗಳಲ್ಲಿ ಎಎಸ್‌ಟಿಇ 1,500ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿದೆ. ಸಂಸ್ಥೆಯ ಸೇವೆಯನ್ನು ಗುರುತಿಸಿ 2006ರಲ್ಲಿ ರಾಷ್ಟ್ರಪತಿಗಳ ಧ್ವಜ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ

ಇಂಡೋಸ್ ಏರ್‌ಬೇಸ್‌ನಲ್ಲಿರುವ ಲಘು ವಿಮಾನ ಧ್ರುವ ಹಾಗೂ ತೇಜಸ್ ಹೆಲಿಕ್ಯ್ಟಾರಗಳು ಇಲ್ಲಿಯೇ ತರಬೇತಿ ಪಡೆದಿದ್ದು, ಇನ್ನಷ್ಟು ಹೆಲಿಕ್ಟಾರ್ ಹಾಗೂ ವಿಮಾನಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಈ ವೇಳೆ ವಿಂಗ್ ಕಮಾಂಡರ್‌ಗಳಾದ ದೀಪಕ್, ಕಾರ್ತಿಕೇಯನ್, ಪವಾರ್, ಮಹೇಂದರ್ ಸೇರಿದಂತೆ ಹಲವರು ಇದ್ದರು.

ಮ್ಯೂಸಿಯಂ

1932ರಲ್ಲಿ ವಾಯುಪಡೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಯುದ್ಧದಲ್ಲಿ ಬಳಕೆಯಾದ ಎಲ್ಲಾ ಮಾದರಿಯ ಬಾಂಬ್ ಹಾಗೂ ವಿಶೆಲ್‌ಗಳು ಸೇರಿದಂತೆ ಎಲ್ಲಾ ರೀತಿಯ ಸೇನಾ ಶಸಾಸಗಳನ್ನು ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೀಡಲಾಗಿದೆ.

ಬೆಂಗಳೂರಿನ ಎಚ್‌ಎಎಲ್ ನಿರ್ಮಿತ ಲಘು ಕಾಂಬಾಟ್ ಹೆಲಿಕಾಪ್ಟರ್ ಧೃವ, ಯುದ್ಧ ವಿಮಾನ ಹಾಕ್‌ನ ಹಾರಾಟ ನಡೆಯಿತು. ಈ ವೇಳೆ ಸೇನಾನಿಗಳನ್ನು ಒತ್ತೊಯ್ಯುವ ಮೆಡಿಕಲ್ ಎರ್ಮೆಜೆನ್ಸಿ ಮತ್ತು ಸರಕು ಸಾಗಣೆಯನ್ನು ಮಾಡುವ ಧೃವ ಹೆಲಿಕಾಪ್ಟ್ಟರ್ ವಿವಿಧ ಪ್ರದರ್ಶನ ನೀಡಿತ್ತು.