2017ನೇ ಸಾಲಿನಲ್ಲಿ ನೋಟು ರದ್ದತಿ ಕಾರಣದಿಂದ 2018ರಲ್ಲಿ ಹಾಲಿ ಉದ್ಯೋಗಿಗಳ ವೇತನ ಶೇ.10ರಿಂದ 15ರಷ್ಟು ಹೆಚ್ಚಳ ಆಗಬಹುದು' ಎಂದು ಭಾರತೀಯ ಉದ್ಯಮ ರಂಗ ಆಶಾಭಾವನೆ ವ್ಯಕ್ತಪಡಿಸಿದೆ.

ನವದೆಹಲಿ (ಡಿ.11): 2017ನೇ ಸಾಲಿನಲ್ಲಿ ನೋಟು ರದ್ದತಿ ಕಾರಣದಿಂದ 2018ರಲ್ಲಿ ಹಾಲಿ ಉದ್ಯೋಗಿಗಳ ವೇತನ ಶೇ.10ರಿಂದ 15ರಷ್ಟು ಹೆಚ್ಚಳ ಆಗಬಹುದು' ಎಂದು ಭಾರತೀಯ ಉದ್ಯಮ ರಂಗ ಆಶಾಭಾವನೆ ವ್ಯಕ್ತಪಡಿಸಿದೆ.

ವೇತನ ಹೆಚ್ಚಳ ಪ್ರಮಾಣ 2017 ರಲ್ಲಿ ಕೇವಲ ಶೇ.8ರಿಂದ 10ರಷ್ಟಿತ್ತು. ಅಪನಗದೀಕರಣದ ಪ್ರಭಾವ ತಗ್ಗಿರುವ ಕಾರಣ 2018ರಲ್ಲಿ ಇದರ ಪ್ರಮಾಣ ಶೇ.10-15ರಷ್ಟು ಆಗಬಹುದು ಎಂದು ಉದ್ಯಮ ವಲಯ ಹೇಳಿದೆ.

2 ತ್ರೈಮಾಸಿಕಕ್ಕೆ ಹೋಲಿಸಿದರೆ 3ನೇ ತ್ರೈಮಾಸಿಕದಲ್ಲಿ ನೇಮಕಾತಿ ಪ್ರಮಾಣ ಹೆಚ್ಚಿದೆ. ವೇತನ ಹೆಚ್ಚಳ ಪ್ರಮಾಣವೂ ಸುಧಾರಿಸಬಹುದು ಎಂದು ಅಂದಾಜಿಸಲಾಗಿದೆ.