ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಹುದ್ದೆಯನ್ನು ಅಲಂಕರಿಸಲು ದೇಶದ ಮೊದಲ ಪ್ರಧಾನಿ ನೆಹರೂ ಅವರೇ ಕಾರಣ ಎಂದು ಕಾಂಗ್ರೆಸ ಮುಖಂಡ ಶಶಿ ತರೂರ್ ಹೇಳಿದ್ದಾರೆ. 

ನವದೆಹಲಿ : ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್ ಇದೀಗ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಪ್ರಮುಖ ಕಾರಣ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರೇ ಎಂದು ಪರೋಕ್ಷ ಹೇಳಿಕೆ ನೀಡಿದ್ದಾರೆ. 

ನೆಹರು ಜನ್ಮದಿನೋತ್ಸವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಂಸ್ಥಿಕ ರಚನಾತ್ಮಕವಾದ ನೀತಿಗಳ ಹಿನ್ನೆಲೆಯಲ್ಲಿ ಇಂದು ಓರ್ವ ಚಾಯ್ ವಾಲಾ ಇಂದು ಪ್ರಧಾನಿಯಾಗಲು ಕಾರಣವಾಯಿತು ಎಂದು ಹೇಳಿದ್ದಾರೆ. 

ಅಲ್ಲದೇ ಆದ್ದರಿಂದ ಇಂದು ನಾವು ಚಾಯಿವಾಲನನ್ನು ಪ್ರಧಾನಿಯಾಗಿ ಪಡೆದಿದ್ದಾರೆ. ನೆಹರು ಅವರೋರ್ವ ದೇಶದ ಪಡೆದ ಹೆಮ್ಮೆಯ ನಾಯಕ ಎಂದೂ ಕೂಡ ಅವರು ಈ ವೇಳೆ ಹೊಗಳಿದ್ದಾರೆ.