ನವದೆಹಲಿ (ಜ. 14): ದೇಶದ ವಿವಿಧ ಹೈಕೋರ್ಟ್‌ಗಳಲ್ಲಿನ ಒಟ್ಟು 670 ನ್ಯಾಯಾಧೀಶರ ಪೈಕಿ ಕೇವಲ 73 ಮಂದಿ ಮಹಿಳಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ, ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

ದೇಶದ ಒಟ್ಟು 24 ಹೈಕೋರ್ಟ್‌ಗಳಲ್ಲಿ ಒಟ್ಟು 1079 ನ್ಯಾಯಾಧೀಶರು ಕಾರ್ಯ ನಿರ್ವಹಿಸಬೇಕಿದೆ. ಆದರೆ, 670  ಜಡ್ಜ್‌ಗಳು ಮಾತ್ರ ಕೆಲಸ ಮಾಡುತ್ತಿದ್ದು, ಉಳಿದ ೪೦೯ ನ್ಯಾಯಾಧೀಶರ ಸ್ಥಾನಗಳಿಗೆ ನೇಮಕವೇ ಆಗಿಲ್ಲ ಎಂದು ಕಾನೂನು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಕಾನೂನು ಸಚಿವಾಲಯ ಮಾಹಿತಿ ನೀಡಿದೆ.