ಬುದ್ಧನ ಹುಟ್ಟು ಹಾಗೂ ಸಾವನ್ನು ನೆನಪಿಸುವ ಅಂತರಾಷ್ಟ್ರೀಯ ವೇಸಕ್ ದಿನದಂದು ಭಾರತ 16 ಸಾವಿರ ಕರಕುಶಲದಿಂದ ತಯಾರಿಸಿದ ಮೇಣದ ಬತ್ತಿಯನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡುವುದಾಗಿ ಭಾರತ ಘೋಷಿಸಿದೆ.
ಕೊಲಂಬೋ (ಮೇ.12): ಬುದ್ಧನ ಹುಟ್ಟು ಹಾಗೂ ಸಾವನ್ನು ನೆನಪಿಸುವ ಅಂತರಾಷ್ಟ್ರೀಯ ವೇಸಕ್ ದಿನದಂದು ಭಾರತ 16 ಸಾವಿರ ಕರಕುಶಲದಿಂದ ತಯಾರಿಸಿದ ಮೇಣದ ಬತ್ತಿಯನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡುವುದಾಗಿ ಭಾರತ ಘೋಷಿಸಿದೆ.
ಅಸ್ಸಾಂನ ದಿಗ್ಬಾಯ್’ನಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಶುದ್ದೀಕರಣ ಘಟಕದಲ್ಲಿ ಪ್ಯಾರಾಫಿನ್ ಮೇಣದಿಂದ ತಯಾರಿಸಲಾದ ವಿಶೇಷ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನರ್ ಗೆ ಮೇಣದ ಬತ್ತಿಯನ್ನು ರವಾನೆ ಮಾಡಲಾಗುವುದು.ಅವರು ಬುದ್ಧನ ದೇವಾಲಯಕ್ಕೆ ನೀಡಲಿದ್ದಾರೆ. ವೇಸಕ್ ದಿನದ ಪ್ರಯುಕ್ತ ಭಾರತದ ಜನತೆ ಶ್ರೀಲಂಕಾ ಜನತೆಗೆ 16 ಸಾವಿರ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
