ಸಭೆ ಅಂತ್ಯದಲ್ಲಿ ನಿತಿನ್ ಗಡ್ಕರಿ ನನಗೇನು ಕಮ್ಮಿಯಾಗಿದೆ, ನಾನೇ ಜಾಹೀರಾತು ಮಾಡಬಹುದಲ್ಲ, ನಾನೇಕೆ ಬೇಡ ಎಂದು ಕೇಳಿದರಂತೆ. ಅಧಿಕಾರಿಗಳು ಎಂದಾದರೂ ಬಾಸ್‌'ಗೆ ಇಲ್ಲ ಎನ್ನುವುದುಂಟೇ. ಹೌದು ಸಾರ್ ನೀವೇ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದರಂತೆ.

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

Add Asianetnews Kannada as a Preferred SourcegooglePreferred

ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಅಭಿಯಾನ ನಡೆಸಲಿದೆಯಂತೆ. ಇದಕ್ಕಾಗಿ ಜಾಹೀರಾತು ನಿರ್ಮಿಸಲು ಯಾರನ್ನು ಕರೆತರುವುದು ಸೂಕ್ತ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರಂತೆ. ಆಗ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣಬೀರ್ ಕಪೂರ್, ಶಾಹಿದ್ ಕಪೂರ್ ಹೀಗೆ ಅನೇಕ ಹೆಸರುಗಳು ಚರ್ಚೆಗೆ ಬಂದವಂತೆ. ಆದರೆ ಯಾವ ಹೆಸರು ಹೇಳಿದರೂ ನಿತಿನ್ ಗಡ್ಕರಿ ಮಾತ್ರ ಇವರು ಬೇಡ ಎಂದು ತಲೆ ಅಲ್ಲಾಡಿಸುತ್ತಿದ್ದರಂತೆ. ಕೊನೆಗೆ ಸಭೆ ಅಂತ್ಯದಲ್ಲಿ ನಿತಿನ್ ಗಡ್ಕರಿ ನನಗೇನು ಕಮ್ಮಿಯಾಗಿದೆ, ನಾನೇ ಜಾಹೀರಾತು ಮಾಡಬಹುದಲ್ಲ, ನಾನೇಕೆ ಬೇಡ ಎಂದು ಕೇಳಿದರಂತೆ. ಅಧಿಕಾರಿಗಳು ಎಂದಾದರೂ ಬಾಸ್‌'ಗೆ ಇಲ್ಲ ಎನ್ನುವುದುಂಟೇ. ಹೌದು ಸಾರ್ ನೀವೇ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದರಂತೆ.

(ಈ ಲೇಖನದ ಪೂರ್ಣ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ)

- ಪ್ರಶಾಂತ್ ನಾತು, ಸುವರ್ಣ ನ್ಯೂಸ್