ಸಿದ್ಧರಾಮಯ್ಯ ಪೊಲಿಟಿಕ್ಸ್ ಬಿಟ್ಟು ಉಳಿದ ವಿಷಯಗಳನ್ನು ಪತ್ರಕರ್ತರ ಜೊತೆ ಮಾತನಾಡುವುದು ಕಡಿಮೆ. 

ಸಿದ್ಧರಾಮಯ್ಯ ಪೊಲಿಟಿಕ್ಸ್ ಬಿಟ್ಟು ಉಳಿದ ವಿಷಯಗಳನ್ನು ಪತ್ರಕರ್ತರ ಜೊತೆ ಮಾತನಾಡುವುದು ಕಡಿಮೆ. ಆದರೆ ನಿನ್ನೆ ದೆಹಲಿ ಪತ್ರಕರ್ತರ ಜೊತೆ ಕುಳಿತಿದ್ದಾಗ ಎದುರಿನ ಟಿವಿಯಲ್ಲಿ ಶಶಿ ಕಪೂರ್ ತೀರಿಕೊಂಡ ಸುದ್ದಿ ಬರುತ್ತಿತ್ತು. ಅಯ್ಯೋ ನಾನು ಶಶಿ ಕಪೂರ್ ಅವರ ಎಷ್ಟು ಸಿನೆಮಾಗಳನ್ನು ನೋಡಿದ್ದೇನೆ ಒಳ್ಳೆಯ ನಟ ಎಂದು ಹೇಳಿದರು. ನಂತರ ತನ್ನ ಕಾಲೇಜ್ ದಿನಗಳಲ್ಲಿ ದೇವಾನಂದ್ ಶಮ್ಮಿ ಕಪೂರ್, ಶಶಿ ಕಪೂರ್ ಫ್ಯಾನ್ ಆಗಿದ್ದೆ ಎಂದು ಹೇಳಿ, ಹಿಂದಿಯ ರಾಜಕುಮಾರ ಕೂಡ ತನಗಿಷ್ಟ ಎಂದು ಹೇಳಿಕೊಂಡರು. ಮೈಸೂರು ಯುವರಾಜ ಕಾಲೇಜ್‌ನಲ್ಲಿ ಬಿಎಸ್‌ಸಿ ಓದುವಾಗ ಸಿದ್ಧರಾಮಯ್ಯ ವಾರಕ್ಕೆ ಒಂದು ಕನ್ನಡ, ಒಂದು ಹಿಂದಿ ಸಿನಿಮಾ ನೋಡುತ್ತಿದ್ದರಂತೆ. ಮಾತು ಹಾಗೆಯೇ ಕ್ರಿಕೆಟ್ ಕಡೆ ಹೊರಳಿದಾಗ, ನಾನು ಈಗಲೂ ಒನ್ ಡೇ ಮ್ಯಾಚ್ ಇದ್ದರೆ ಸ್ವಲ್ಪ ಹೊತ್ತು ಕುಳಿತು ನೋಡುತ್ತೇನೆ. ನನಗೆ ಆಗಿನವರಲ್ಲಿ ಸುನಿಲ್ ಗವಾಸ್ಕರ ಸಚಿನ್ ತೆಂಡೂಲ್ಕರ್ ಮತ್ತು ಈಗ ವಿರಾಟ್ ಕೊಹ್ಲಿ ಬಹಳವೇ ಇಷ್ಟ ಎಂದರು. ಸಂಡೇ ಮ್ಯಾಚ್ ಇದ್ದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಇದ್ದರೆ ಸ್ವಲ್ಪ ಹೊತ್ತು ಕ್ರಿಕೆಟ್ ನೋಡಿಯೇ ಹೋಗುತ್ತಾರಂತೆ. ಅಡ್ಡಿ ಇಲ್ಲ ಸರ್ ನಿಮಗೆ ಪೊಲಿಟಿಕ್ಸ್ ಬಿಟ್ಟು ಬೇರೆ ಎಲ್ಲ ಗೊತ್ತಿದೆ ಎಂದು ಯಾರೋ ಪತ್ರಕರ್ತರು ಹೇಳಿದಾಗ ನಾನು ಜೀವನ ಪ್ರೀತಿ ಇರುವ ಮನುಷ್ಯರೀ ಎಂದು ಸಿದ್ದು ಮರುನುಡಿದರು.

Add Asianetnews Kannada as a Preferred SourcegooglePreferred

ಪ್ರಶಾಂತ್ ನಾತು

(ಇಂಡಿಯಾ ಗೇಟ್ ಆಯ್ದ ಭಾಗ)