ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಜನಿಸಿದ್ದ ಅಣ್ಣಾ ರಾಜಂ ಜಾರ್ಜ್, ಕಲ್ಲಿಕೋಟೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿ, ನಂತರ ಚೆನ್ನೈನ ಮದ್ರಾಸ್‌ ವಿವಿಯಲ್ಲಿ ಶಿಕ್ಷಣ ಪಡೆದಿದ್ದರು. 

ಮುಂಬೈ[ಸೆ.19]: ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್‌ ಅಧಿಕಾರಿ, ಪದ್ಮಭೂಷಣ ಪುರಸ್ಕೃತೆ ಅಣ್ಣಾ ರಾಜಂ ಮಲ್ಹೋತ್ರಾ(91) ಸೋಮವಾರ ನಿಧನರಾದರು. 

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಜನಿಸಿದ್ದ ಅಣ್ಣಾ ರಾಜಂ ಜಾರ್ಜ್, ಕಲ್ಲಿಕೋಟೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿ, ನಂತರ ಚೆನ್ನೈನ ಮದ್ರಾಸ್‌ ವಿವಿಯಲ್ಲಿ ಶಿಕ್ಷಣ ಪಡೆದಿದ್ದರು. 

1951ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಮದ್ರಾಸ್‌ ಕೇಡರ್‌ನಲ್ಲೇ ಸೇವೆಗೆ ನಿಯೋಜನೆಯಾದರು. ನಂತರ 1985ರಿಂದ 1990ರಲ್ಲಿ ಆರ್‌ಬಿಐ ಗವರ್ನರ್‌ ಆಗಿದ್ದ ಆರ್‌.ಎನ್‌.ಮಲ್ಹೋತ್ರಾ ಅವರೊಂದಿಗೆ ಅಣ್ಣಾ ರಾಜಂ ಜಾರ್ಜ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಲ್ಹೋತ್ರಾ ಅವರು ತಮ್ಮ ಸೇವಾವಧಿಯಲ್ಲಿ ತಮಿಳುನಾಡಿನ 7 ಮುಖ್ಯಮಂತ್ರಿಗಳೊಂದಿಗೆ ಕಾರ್ಯ ನಿರ್ವಹಿಸಿದ್ದರು.