ವಾಷಿಂಗ್ಟನ್‌[ಏ.15]: ಪ್ರಸ್ತುತ ಭಾರತ ಬರೋಬ್ಬರಿ 6 ಲಕ್ಷ ವೈದ್ಯರು ಮತ್ತು 2 ಕೋಟಿ ನರ್ಸ್‌ಗಳ ಕೊರತೆ ಎದುರಿಸುತ್ತಿದೆ. ಅಲ್ಲದೆ ಜೀವ ಉಳಿಸಬಲ್ಲ ಆ್ಯಂಟಿಬಯೋಟಿಕ್ಸ್‌ಗಳನ್ನು ಸೂಕ್ತ ರೀತಿಯಲ್ಲಿ ಶಿಫಾರಸು ಮಾಡುವ ನುರಿತ ಸಿಬ್ಬಂದಿಗಳ ಕೊರತೆಯನ್ನು ಭಾರತ ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ.

ಅಮೆರಿಕದ ‘ಸೆಂಟರ್‌ ಫಾರ್‌ ಡಿಸೀಸ್‌ ಡೈನಾಮಿಕ್ಸ್‌, ಎಕನಾಮಿಕ್ಸ್‌ ಆ್ಯಂಡ್‌ ಪಾಲಿಸಿ’ (ಸಿಡಿಡಿಇಪಿ) ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶವಿದೆ. ಭಾರತದಲ್ಲಿ ಆ್ಯಂಟಿಬಯೋಟಿಕ್ಸ್‌ ಲಭ್ಯತೆ ಇದ್ದರೂ, ಬಹುತೇಕ ಸಮಯದಲ್ಲಿ ರೋಗಿಗಳನ್ನು ಅವುಗಳನ್ನು ಖರೀದಿಸಲು ಆರ್ಥಿಕವಾಗಿ ಸಶಕ್ತರಾಗಿರುವುದಿಲ್ಲ. ಆರೋಗ್ಯ ಸೇವೆ ಸರ್ಕಾರ ನಿಯಮಿತ ಪ್ರಮಾಣದಲ್ಲಿ ಹಣ ವೆಚ್ಚ ಮತ್ತು ದುಬಾರಿ ದರದ ಆರೋಗ್ಯ ಸೇವೆಗಳು, ರೋಗಿಗಳನ್ನು ಆರೋಗ್ಯ ಸೇವೆಯಿಂದ ವಂಚಿಸುತ್ತಿವೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಪ್ರತಿ 10189 ಜನರಿಗೆ ಒಬ್ಬ ವೈದ್ಯರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ಈ ಅನುಪಾತ ಪ್ರತಿ 1000ಕ್ಕೆ ಒಬ್ಬರು ಇರಬೇಕು. ಈ ಲೆಕ್ಕಾಚಾರದಲ್ಲಿ ದೇಶವು 6 ಲಕ್ಷ ವೈದ್ಯರು ಮತ್ತು 20 ಲಕ್ಷ ನರ್ಸ್‌ಗಳ ಕೊರತೆ ಎದುರಿಸುತ್ತಿದೆ. ಭಾರತದಲ್ಲಿ ಶೇ.65ರಷ್ಟುಆರೋಗ್ಯ ಸೇವಾ ವೆಚ್ಚವನ್ನು ಜನತೆ ಸಾಲ ಮಾಡಿಯೇ ಭರಿಸುತ್ತಿದ್ದಾರೆ. ಪರಿಣಾಮ ಸುಮಾರು ಪ್ರತಿ ವರ್ಷ 5.7 ಕೋಟಿ ಜನ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದು ವರದಿ ಹೇಳಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.