ಭಾರತದ ಮಾಜಿ ಯೋಧ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದರ ಬಗ್ಗೆ ಪಾಕಿಸ್ತಾನ ಭಾರತದ ಜೊತೆ ಸಂವಹನ ನಡೆಸಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಾಧವ್ ಯಾವುದೇ ಸ್ಥಿತಿಯಲ್ಲಿದ್ದರೂ ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಬೇಕಿತ್ತು. ಆದರೆ ಪಾಕಿಸ್ತಾನ ರಾಯಭಾರಿ ಸಂಪರ್ಕಿಸಲು ಕೂಡಾ ನಿರಾಕರಿಸಿದೆ ಎಂದು ವಿದೇಶಾಂಗ ವಕ್ತಾರ ತಿಳಿಸಿದ್ದಾರೆ.
ನವದೆಹಲಿ (ಏ.13): ಭಾರತದ ಮಾಜಿ ಯೋಧ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದರ ಬಗ್ಗೆ ಪಾಕಿಸ್ತಾನ ಭಾರತದ ಜೊತೆ ಸಂವಹನ ನಡೆಸಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಾಧವ್ ಯಾವುದೇ ಸ್ಥಿತಿಯಲ್ಲಿದ್ದರೂ ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಬೇಕಿತ್ತು. ಆದರೆ ಪಾಕಿಸ್ತಾನ ರಾಯಭಾರಿ ಸಂಪರ್ಕಿಸಲು ಕೂಡಾ ನಿರಾಕರಿಸಿದೆ ಎಂದು ವಿದೇಶಾಂಗ ವಕ್ತಾರ ತಿಳಿಸಿದ್ದಾರೆ.
ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವ ಸುಳಿವು ನಮಗೆ ಸಿಗುತ್ತಿಲ್ಲ. ಜಾಧವ್ ಇರಾನ್ ನಲ್ಲಿ ಸಣ್ಣ ಬ್ಯಸಿನೆಸ್ ನ್ನು ಹೊಂದಿದ್ದಾರೆ. ಅಲ್ಲಿಂದ ಅವರನ್ನು ಕಿಡ್ನಾಪ್ ಮಾಡಿರುವ ಸೂಚನೆಯಿದೆ. ಕಳೆದ ವರ್ಷ ಿರಾನ್ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿತ್ತು. ಬಳಿಕ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿದೇಶಾಂಗ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.
ಸಾಮಾನ್ಯವಾಗಿ ರಾಯಭಾರಿಯನ್ನು ಭೇಟಿ ಮಾಡಲು ಶೀಘ್ರವಾಗಿ ಅವಕಾಶ ನೀಡಲಾಗುತ್ತದೆ. ಆದರೆ ಪಾಕಿಸ್ತಾನ ಿದಕ್ಕೆ ನಿರಾಕರಿಸುತ್ತಿದೆ. ಇವರು ಪಾಕಿಸ್ತಾನಕ್ಕೆ ಹೇಗೆ ಹೋದರು ಎಂಬುದನ್ನು ಪರಿಶೀಲಿಸಬೇಕು. ಸದ್ಯಕ್ಕೆ ಅವರ ಉಪಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.ಅವರನ್ನು ಭೇಟಿ ಮಾಡುವುದು ಅಂತರಾಷ್ಟ್ರೀಯ ಕಾನೂನಿನ ಒಂದು ಭಾಗವಾಗಿದೆ ಎಂದು ಬಾಗ್ಲೆ ಹೇಳಿದ್ದಾರೆ.
ಜಾಧವ್ ರವರು ಒಂದು ವೇಳೆ ಬೇಹುಗಾರಿಕಾ ಉದ್ದೇಶದಿಂದ ಹೋಗಿದ್ದರೆ ಭಾರತದ ಪಾಸ್ ಪೋರ್ಟ್ ತೆಗೆದುಕೊಂಡು ಹೋಗಬೇಕಿತ್ತು ಎಂದಿದ್ದಾರೆ.
