ಮತ್ತೆ ಡೋಕ್ಲಾಂನಲ್ಲಿ ಚೀನಾ ಖ್ಯಾತೆ : ನಿರ್ಮಲಾ ಸೀತಾರಾಮನ್ ಉತ್ತರ

First Published 26, Mar 2018, 12:15 PM IST
India Alert And Ready Says Defence Minister Nirmala Sitharaman On Doklam
Highlights

ನಾವು ಎಚ್ಚರವಾಗಿದ್ದೇವೆ ಮತ್ತು ಡೋ ಕ್ಲಾಂನಲ್ಲಿ ಯಾವುದೇ ಅನಿರೀಕ್ಷಿತ ಸ್ಥಿತಿ ಎದುರಿ ಸಲು ಸಿದ್ಧರಾಗಿದ್ದೇವೆ. ನಮ್ಮ ಸೇನಾ ಪಡೆಗಳನ್ನು ಸತತ ಆಧುನಿಕೀಕರಣದತ್ತ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ನಮ್ಮ ಭೂವ್ಯಾಪ್ತಿಯ ಸಮಗ್ರತೆಯನ್ನು ಕಾಪಾಡುತ್ತೇವೆ’ ಎಂದು ನಿರ್ಮಲಾ ಹೇಳಿದ್ದಾರೆ.

ಡೆಹ್ರಾಡೂನ್: ‘ನಾವು ಎಚ್ಚರವಾಗಿದ್ದೇವೆ ಮತ್ತು ಡೋ ಕ್ಲಾಂನಲ್ಲಿ ಯಾವುದೇ ಅನಿರೀಕ್ಷಿತ ಸ್ಥಿತಿ ಎದುರಿ ಸಲು ಸಿದ್ಧರಾಗಿದ್ದೇವೆ. ನಮ್ಮ ಸೇನಾ ಪಡೆಗಳನ್ನು ಸತತ ಆಧುನಿಕೀಕರಣದತ್ತ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ನಮ್ಮ ಭೂವ್ಯಾಪ್ತಿಯ ಸಮಗ್ರತೆಯನ್ನು ಕಾಪಾಡುತ್ತೇವೆ’ ಎಂದು ನಿರ್ಮಲಾ ಹೇಳಿದ್ದಾರೆ.

ಡೋಕ್ಲಾಂ ವಿವಾದ ಇನ್ನೇನು ತಣ್ಣಗಾಯಿತು ಎನ್ನುವ ಹಂತದಲ್ಲೇ, ಮತ್ತೆ ಭಾರತ ಮತ್ತು ಚೀನಾ ನಡುವೆ ವಾಕ್ಸಮರ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಈ ಮಾತನ್ನು ಹೇಳಿದ್ದಾರೆ.

ಡೋಕ್ಲಾಂನಲ್ಲಿ ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭೂಭಾಗದ ಒಂದಿಂಚು ಜಾಗ ವನ್ನೂ ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ.

ತಮ್ಮ ಶತ್ರುಗಳ ವಿರುದ್ಧ ಭೀಕರ ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

loader