Asianet Suvarna News Asianet Suvarna News

ಅತೀ ಶ್ರೀಮಂತರ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಭಾರತದ ಜನರ ಕೈಲಿ ಒಟ್ಟು ಸುಮಾರು 550 ಲಕ್ಷ ಕೋಟಿ ರು. (8230 ಶತಕೋಟಿ ಡಾಲರ್) ಹಣವಿದ್ದು, ಅವರಿಂದಾಗಿ ಭಾರತವೀಗ ಜಗತ್ತಿನಲ್ಲೇ ೬ನೇ ಅತಿ ಶ್ರೀಮಂತರ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 4200 ಲಕ್ಷ ಕೋಟಿ ರು. (62584 ಶತಕೋಟಿ ಡಾಲರ್) ಸಂಪತ್ತಿನೊಂದಿಗೆ ಅಮೆರಿಕವು ಜಗತ್ತಿನ ನಂ.1 ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಎರಡನೇ ಸ್ಥಾನವನ್ನು ಚೀನಾ ಪಡೆದಿದೆ.

India  6 th place in richest country

ನವದೆಹಲಿ (ಮೇ. 21): ಭಾರತದ ಜನರ ಕೈಲಿ ಒಟ್ಟು ಸುಮಾರು 550 ಲಕ್ಷ ಕೋಟಿ ರು. (8230 ಶತಕೋಟಿ ಡಾಲರ್) ಹಣವಿದ್ದು, ಅವರಿಂದಾಗಿ ಭಾರತವೀಗ ಜಗತ್ತಿನಲ್ಲೇ ೬ನೇ ಅತಿ ಶ್ರೀಮಂತರ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 4200 ಲಕ್ಷ ಕೋಟಿ ರು. (62584 ಶತಕೋಟಿ ಡಾಲರ್) ಸಂಪತ್ತಿನೊಂದಿಗೆ ಅಮೆರಿಕವು ಜಗತ್ತಿನ ನಂ.1 ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಎರಡನೇ ಸ್ಥಾನವನ್ನು ಚೀನಾ ಪಡೆದಿದೆ.

ಮಾರಿಷಸ್ ಮೂಲದ ಅಫ್ರೇಷಿಯಾ ಬ್ಯಾಂಕ್ ಜಾಗತಿಕ ಖಾಸಗಿ ಸಂಪತ್ತಿನ ಪರಾಮರ್ಶೆ ವರದಿ ಸಿದ್ಧಪಡಿಸಿದೆ. ಅದರಲ್ಲಿ ಭಾರತಕ್ಕೆ 6 ನೇ ಸ್ಥಾನ ನೀಡಿದೆ. ಇದರಲ್ಲಿ ಭಾರತದ ಸಂಪತ್ತು ಅಂದರೆ ನಮ್ಮ ದೇಶದ ಜನರ ಕೈಲಿರುವ ಒಟ್ಟು ಖಾಸಗಿ ಸಂಪತ್ತಿನಲ್ಲಿ ಜನರ ಸಾಲ ಕಳೆದು ಸಿಗುವ ಮೊತ್ತವನ್ನಷ್ಟೇ ಪರಿಗಣಿಸಲಾಗಿದೆ. ಜನರ ಸ್ಥಿರಾಸ್ತಿ, ನಗದು, ಷೇರು, ಉದ್ಯಮದಲ್ಲಿ ತೊಡಗಿಸಿರುವ ಹಣ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.

ಇನ್ನು, ಸರ್ಕಾರದ ಸಂಪತ್ತನ್ನು ಈ ಪಟ್ಟಿಗೆ ಪರಿಗಣಿಸಿಲ್ಲ. ಟಾಪ್ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ, ಜಪಾನ್, ಬ್ರಿಟನ್, ಜರ್ಮನಿ, ಭಾರತ, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ ಹಾಗೂ ಇಟಲಿ ಸೇರಿವೆ. ಭಾರತದಲ್ಲಿ ಸಂಪತ್ತಿನ ಸೃಷ್ಟಿ ಹೆಚ್ಚಲು ವೇಗವಾಗಿ ಬೆಳೆಯುತ್ತಿರುವ ಉದ್ಯಮಿಗಳ ಸಂಖ್ಯೆ, ಒಳ್ಳೆಯ ಶಿಕ್ಷಣ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ ಉದ್ದಿಮೆಗಿರುವ  ಉಜ್ವಲ ಭವಿಷ್ಯ, ಹೊರಗುತ್ತಿಗೆ ಉದ್ಯಮದ ಬೆಳವಣಿಗೆ, ರಿಯಲ್ ಎಸ್ಟೇಟ್, ಆರೋಗ್ಯ ಕ್ಷೇತ್ರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಆಗಿರುವ ಶೇ. 200 ರಷ್ಟು ಬೆಳವಣಿಗೆಯೇ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

2027 ರ ವೇಳೆ ಚೀನಾದ ಖಾಸಗಿ ಸಂಪತ್ತು 4600 ಲಕ್ಷ ಕೋಟಿಗೂ, ಅಮೆರಿಕದವರ ಖಾಸಗಿ ಸಂಪತ್ತು 5000 ಲಕ್ಷ ಕೋಟಿಗೂ ಹೆಚ್ಚಲಿದೆ. ಸದ್ಯ ಜಗತ್ತಿನ ಎಲ್ಲಾ ಜನರ ಕೈಲಿರುವ ಖಾಸಗಿ ಆಸ್ತಿಯ ಮೊತ್ತ 14 ಸಾವಿರ ಲಕ್ಷ ಕೋಟಿ ರು. ಆಗಿದೆ. ಜಗತ್ತಿನಲ್ಲಿ 6.7  ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿರುವ 1.5 ಕೋಟಿ ಜನರಿದ್ದಾರೆ. ಮುಂದಿನ ದಶಕದಲ್ಲಿ ಜಗತ್ತಿನ ಒಟ್ಟು ಖಾಸಗಿ ಸಂಪತ್ತು ಶೇ.50 ರಷ್ಟು ಹೆಚ್ಚಾಗಲಿದೆ ಎಂದು ವರದಿ ಹೇಳಿದೆ. 

Follow Us:
Download App:
  • android
  • ios