Asianet Suvarna News Asianet Suvarna News

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂತತಿ ಹೆಚ್ಚಳ

ಕಳೆದ ವರ್ಷದ ಹುಲಿ ಗಣತಿಯ ಅಂಕಿ ಅಂಶಗಳ ಪ್ರಕಾರ ವಿಶ್ವದ ಶೇ.70ರಷ್ಟು ಹುಲಿಗಳು ಕರ್ನಾಟಕದಲ್ಲಿವೆ. ಗರಹೊಳೆಯಲ್ಲಿ ಪ್ರತಿ 10 ಚದರ ಕಿಮಿ ಗೆ ಒಂದು ಹುಲಿ ಇದೆ.

Increasing the Tiger population at nagarahole
  • Facebook
  • Twitter
  • Whatsapp

ಮೈಸೂರು(ಮೇ.03): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿದೆ.  ಅಂತರಸಂತೆ ವಲಯಕ್ಕೆ ಸೇರಿದ ಕಬಿನಿ ಪ್ರವಾಸೋದ್ಯಮ ವಲಯದಲ್ಲಿ ಒಂದೇ ದಿನ 7 ಹುಲಿಗಳು ಕಾಣಿಸಿಕೊಂಡಿದ್ದು, ಸಫಾರಿ ಪ್ರಿಯರನ್ನು ರೋಮಾಂಚನಗೊಳಿಸುತ್ತಿವೆ.

ಕಳೆದ ವರ್ಷದ ಹುಲಿ ಗಣತಿಯ ಅಂಕಿ ಅಂಶಗಳ ಪ್ರಕಾರ ವಿಶ್ವದ ಶೇ.70ರಷ್ಟು ಹುಲಿಗಳು ಕರ್ನಾಟಕದಲ್ಲಿವೆ. ನಗರಹೊಳೆಯಲ್ಲಿ ಪ್ರತಿ 10 ಚದರ ಕಿಮಿ ಗೆ ಒಂದು ಹುಲಿ ಇದೆ. ನಾಗರ ಹೊಳೆಯಲ್ಲಿ ಹುಲಿಗಳ ಸಂಖ್ಯೆ 150ಕ್ಕೂ ಹೆಚ್ಚಿವೆ ಎನ್ನಲಾಗುತ್ತಿದೆ. ಕಲೇದ 7 ವರ್ಷಗಳಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗಿದ್ದು, ಕರ್ನಾಟಕ ನಂ 1 ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತೀ ಹೆಚ್ಚು 406 ಹುಲಿಗಳಿದ್ದರೆ, ಉತ್ತರಾಖಂಡದಲ್ಲಿ 340, ತಮಿಳುನಾಡಿನಲ್ಲಿ 229, ಮಧ್ಯಪ್ರದೇಶ 208, ಮಹಾರಾಷ್ಟ್ರ 190 ಹಾಗೂ ಬಂಗಾಳದ ಸುಂದರಬನದಲ್ಲಿ 76 ಹುಲಿಗಳಿವೆ.

20ನೇ ಶತಮಾನದ ಆರಂಭದಲ್ಲಿ ಅಂದಾಜು 1 ಲಕ್ಷ ಇದ್ದ ಹುಲಿಗಳ ಸಂಖ್ಯೆ 2008ರ ವೇಳೆಗೆ 1411ಕ್ಕೆ ಕುಸಿದಿತ್ತು.

Follow Us:
Download App:
  • android
  • ios