Asianet Suvarna News Asianet Suvarna News

ದೇಶ ಬಿಟ್ಟು ವಿದೇಶದಲ್ಲಿ ನೆಲೆಸುತ್ತಿರುವ  ಭಾರತೀಯ ಶ್ರೀಮಂತರ ಸಂಖ್ಯೆಯಲ್ಲಿ ಹೆಚ್ಚಳ!

  • 2017ರಲ್ಲಿ 7000 ಕೋಟ್ಯಧಿಪತಿಗಳು ಭಾರತದಿಂದ ವಿದೇಶಕ್ಕೆ!
  • 2015ರಲ್ಲಿ ಭಾರತದಿಂದ 4000, 2016ರಲ್ಲಿ 6000 ಕೋಟ್ಯಧಿಪತಿಗಳು ವಿದೇಶಕ್ಕೆ ವಲಸೆ ಹೋಗಿದ್ದರು
Increase in  number of people settling abroad

ನವದೆಹಲಿ: ದೇಶ ಬಿಟ್ಟು ವಿದೇಶಕ್ಕೆ ಹೋಗಿ ನೆಲೆಸುವ ಅತಿ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2017ರಲ್ಲಿ ಭಾರತದಿಂದ 7000 ಕೋಟ್ಯಧಿಪತಿಗಳು ವಿದೇಶಕ್ಕೆ ವಲಸೆ ಹೋಗಿದ್ದಾರೆ. ದೇಶ ಬಿಟ್ಟು ವಿದೇಶಕ್ಕೆ ಹೋಗಿ ‘ಸೆಟ್ಲ್’ ಆಗುವವರ ಸಂಖ್ಯೆಯಲ್ಲಿ ಚೀನೀಯರನ್ನು ಬಿಟ್ಟರೆ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ.

2015ರಲ್ಲಿ ಭಾರತದಿಂದ 4000, 2016ರಲ್ಲಿ 6000 ಕೋಟ್ಯಧಿಪತಿಗಳು ವಿದೇಶಕ್ಕೆ ವಲಸೆ ಹೋಗಿದ್ದರು. 2017ರಲ್ಲಿ ಅವರ ಸಂಖ್ಯೆ 7000ಕ್ಕೆ ಹೆಚ್ಚಿದೆ.

ಚೀನಾದಿಂದ 2017ರಲ್ಲಿ 10000 ಅತಿ ಶ್ರೀಮಂತರು ವಿದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ಎಂಬ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

1 ದಶಲಕ್ಷ ಡಾಲರ್ (ಸುಮಾರು 6.5 ಕೋಟಿ ರು.) ಆಸ್ತಿ ಹೊಂದಿರುವವರನ್ನು ಜಾಗತಿಕ ಮಟ್ಟದಲ್ಲಿ ಅತಿ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಇಷ್ಟು ಅಥವಾ ಇದಕ್ಕಿಂತ ಹೆಚ್ಚು ಆಸ್ತಿ ಹೊಂದಿರುವವರ ಸಂಖ್ಯೆ ಭಾರತದಲ್ಲಿ 330400 ಇದೆ.

2017ರಲ್ಲಿ ಭಾರತ ಬಿಟ್ಟು ಹೋಗಿರುವ ಕೋಟ್ಯಧಿಪತಿಗಳಲ್ಲಿ ಹೆಚ್ಚಿನವರು ಅಮೆರಿಕ, ಯುಎಇ, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್’ಗೆ ಹೋಗಿದ್ದಾರೆ. ಚೀನಾದಿಂದ ಹೋದವರು ಹೆಚ್ಚಾಗಿ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದಾರೆ.

Follow Us:
Download App:
  • android
  • ios