ಲೆಕ್ಕಪರಿಶೋಧನೆಯಾಗದ ತೆರಿಗೆದಾರರ ರಿಟರ್ನ್‌ ಸಲ್ಲಿಸುವ ಸಲುವಾಗಿ ಅಂತಿಮ ಅವಧಿಯನ್ನು ವಿಸ್ತರಿಸಬೇಕು ಎಂದು ಹಲವಾರು ನಿಯೋಗಗಳು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಮನವಿ ಮಾಡಿದ್ದವು.

ನವದೆಹಲಿ[ಸೆ.25]: 2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಹಾಗೂ ಲೆಕ್ಕಪರಿಶೋಧನೆ ವರದಿಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಅಕ್ಟೋಬರ್‌ 15ರವರೆಗೂ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 

Scroll to load tweet…

ಇದನ್ನು ಓದಿ:ಆದಾಯ ತೆರಿಗೆ ಸಲ್ಲಿಸುವವರ ಪ್ರಮಾಣ ದ್ವಿಗುಣ

ಲೆಕ್ಕಪರಿಶೋಧನೆಯಾಗದ ತೆರಿಗೆದಾರರ ರಿಟರ್ನ್‌ ಸಲ್ಲಿಸುವ ಸಲುವಾಗಿ ಅಂತಿಮ ಅವಧಿಯನ್ನು ವಿಸ್ತರಿಸಬೇಕು ಎಂದು ಹಲವಾರು ನಿಯೋಗಗಳು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸೆ.30ಕ್ಕೆ ಮುಗಿಯಬೇಕಿದ್ದ ಗಡುವನ್ನು ಅ.15ರವರೆಗೆ ವಿಸ್ತರಣೆ ಮಾಡಲಾಗಿದೆ ಸಿಬಿಡಿಟಿ ಸೋಮವಾರ ತಿಳಿಸಿದೆ.