ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆ ಮತ್ತು ಮಾತೃಭಾಷೆ ಅಳಿವು-ಉಳಿವಿನ ಕುರಿತ ಚರ್ಚೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದಿಂದ ನ.27​ರಂದು ನಗರದಲ್ಲಿ ಶಿಕ್ಷಕ, ಪೋಷಕರ ಹಾಗೂ ಚಿಂತರನ್ನೊಳಗೊಂಡ ಸಮಾವೇಶ

ಬೆಂಗಳೂರು (ನ.18): ರಾಯಚೂರಿನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆ ಮತ್ತು ಮಾತೃಭಾಷೆ ಅಳಿವು-ಉಳಿವಿನ ಕುರಿತ ಚರ್ಚೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ನ.27​ರಂದು ನಗರದಲ್ಲಿ ಶಿಕ್ಷಕ, ಪೋಷಕರ ಹಾಗೂ ಚಿಂತರನ್ನೊಳಗೊಂಡ ಸಮಾವೇಶ ಹಮ್ಮಿಕೊಂಡಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಶ್ರೀಪಾದ್‌ ಭಟ್‌, ಕನ್ನಡ ರಾಜ್ಯೋತ್ಸವ​ದಂದು ಭಾಷಣಗಳಲ್ಲಿ ಪ್ರಸ್ತಾಪಿಸುವ ಯಾವ ಭರವಸೆಯನ್ನೂ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಈಡೇರಿಸಲು ಮುಂದಾಗಿಲ್ಲ. ಇದುವರೆಗೂ ಕನ್ನಡ ಶಾಲೆಗಳ ಉಳಿವಿಗಾಗಿ, ಮಾತೃಭಾಷಾ ಶಿಕ್ಷಣ ಹಾಗೂ ಕನ್ನಡ ಉಳಿಸಿ-ಬೆಳೆಸುವ ಕುರಿತು ವಿಶೇಷ ಗಮನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ನಾಡು-​ನುಡಿಗಾಗಿ ಕೆಲಸ ಮಾಡುವುದನ್ನು ಮರೆತಿವೆ ಎಂದರು.

(ಸಾಂದರ್ಭಿಕ ಚಿತ್ರ)