ಬೆಳಗಾವಿ (ಸೆ.18): ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್’ಗೆ ಕ್ಲೀನ್ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ, ಅವರನ್ನು ವಾಪಸು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹೆಸರು ಕೇಳಿ ಬಂದುದರಿಂದ ಅವರು ಸಚಿವ ಸಂಪುಟಕ್ಕೆ ರಾಜಿನಾಮೆ ಕೊಟ್ಟಿದ್ದರು.
ಜಾರ್ಜ್ ನಿರ್ದೋಷಿಯಾಗಿರುವುದರಿಂದ ಸಂಪುಟ ಸೇರುವ ನೈತಿಕ ಹಕ್ಕು ಇದೆ. ಅವರನ್ನು ಸಂಪುಟಕ್ಕೆ ಸೇರಿಸಿ, ಸಚಿವ ಸ್ಥಾನ ನೀಡುವ ನೈತಿಕ ಜವಾಬ್ದಾರಿ ಪಕ್ಷದ ಮೇಲಿದೆ ಎಂದು ಸಚಿವ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ - ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ಜನರು ಆತಂಕ ಪಡಬೇಕಿಲ್ಲ , ಸರ್ಕಾರ ಗಡಿ ವಿಚಾರದಲ್ಲಿ ಎಲ್ಲ ರೀತಿಯ ಎಚ್ಚರಿಕೆ ವಹಿಸಿದೆ ಎಂದು ಹೇಳಿರುವ ಪಾಟೀಲ್, ಬೆಂಗಳೂರು ಕಾವೇರಿ ಗಲಾಟೆಯಲ್ಲಿ ಆರೆಸ್ಸೆಸ್ ಕೈವಾಡದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
