5 ರಿಂದ 8ನೇ ತರಗತಿ ಅಭ್ಯರ್ಥಿಗಳು ಕೇವಲ 7400 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ ಕಳೆದ 12 ವರ್ಷಗಳಿಂದ ಜವಾನ ಓಲೆಕಾರರ ಹುದ್ದೆಗಳು ಖಾಲಿಯಿವೆ.
ಲಖನೌ[ಆ.31]: ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಟೆಲಿಕಾಂ ವಿಭಾಗದಲ್ಲಿ ಕರೆದಿರುವ 62 ಜವಾನ ಓಲೆಕಾರ ಹುದ್ದೆಗೆ 3700 ಪಿ.ಹೆಚ್ ಡಿ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.
ಈ ಹುದ್ದೆಗೆ ಸಾಮಾನ್ಯ ವಿದ್ಯಾರ್ಹತೆ 5ನೇ ತರಗತಿ. ಆದರೆ 3700 ಪಿ.ಹೆಚ್ ಡಿ, 28 ಸಾವಿರ ಸ್ನಾತಕೋತ್ತರ ಹಾಗೂ 50 ಸಾವಿರ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಸ್ನಾತಕೋತ್ತರ ಪದವೀಧರರಲ್ಲಿ ಎಂಬಿಎ ಹಾಗೂ ಇಂಜಿನಿಯರಿಂಗ್ ಪಡೆದವರು ಸೇರಿದ್ದಾರೆ.
5 ರಿಂದ 8ನೇ ತರಗತಿ ಅಭ್ಯರ್ಥಿಗಳು ಕೇವಲ 7400 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ ಕಳೆದ 12 ವರ್ಷಗಳಿಂದ ಜವಾನ ಓಲೆಕಾರರ ಹುದ್ದೆಗಳು ಖಾಲಿಯಿವೆ. ಈ ಹುದ್ದೆಯು ಪೊಲೀಸ್ ಟೆಲಿಕಾಂ ಇಲಾಖೆಯಿಂದ ಇತರ ಕಚೇರಿಗಳಿಗೆ ಪತ್ರಗಳನ್ನು ಸೈಕಲ್ ನಲ್ಲಿ ರವಾನಿಸುವುದಾಗಿದೆ. ವಿದ್ಯಾರ್ಹತೆಗಿಂತ ಚೆನ್ನಾಗಿ ಸೈಕಲ್ ಸವಾರಿ ಮಾಡುವವರನ್ನು ನೇಮಿಸಿಕೊಳ್ಳಲಾಗುತ್ತದೆ. ಇದು ಪೂರ್ಣ ಸರ್ಕಾರಿ ಕೆಲಸವಾಗಿದ್ದು ಆಯ್ಕೆಯಾದವರಿಗೆ 20 ಸಾವಿರ ರೂ. ವೇತನ ನೀಡಲಾಗುತ್ತದೆ.
