Asianet Suvarna News Asianet Suvarna News

ಚಿತ್ರಮಂದಿರ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಆರಂಭ!

ಮಾಗಡಿ ರಸ್ತೆಯ ಪ್ರಮೋದ್‌ ಚಿತ್ರಮಂದಿರದ ಜಾಗದಲ್ಲಿ ನೂತನವಾಗಿ ಆರಂಭವಾದ ಜಿ.ಟಿ. ವಲ್ಡ್‌ರ್‍ ಮಾಲ್‌ನ ‘ದಿ ಸಿನಿಮಾಸ್‌'ನಲ್ಲಿ ಶುಕ್ರವಾರ( ಜೂ.9)ದಿಂದ ಸಿನಿಮಾ ಪ್ರದರ್ಶನ ಶುರುವಾಗುತ್ತಿದೆ. ಐದು ಸ್ಕ್ರೀನ್‌ಗಳ ಈ ಮಾಲ್‌ನಲ್ಲಿ ಸುಸಜ್ಜಿತ ವ್ಯವಸ್ಥೆ ಯೊಂದಿಗೆ ಸಿನಿಮಾ ನೋಡುವ ಅವಕಾಶ ಪ್ರೇಕ್ಷಕರಿಗೆ ಲಭ್ಯವಿದೆ.

In The Place Of Cinema Theatre Multiplex Will Be Constucted
  • Facebook
  • Twitter
  • Whatsapp

ಬೆಂಗಳೂರು(ಜೂ.09): ಮಾಗಡಿ ರಸ್ತೆಯ ಪ್ರಮೋದ್‌ ಚಿತ್ರಮಂದಿರದ ಜಾಗದಲ್ಲಿ ನೂತನವಾಗಿ ಆರಂಭವಾದ ಜಿ.ಟಿ. ವಲ್ಡ್‌ರ್‍ ಮಾಲ್‌ನ ‘ದಿ ಸಿನಿಮಾಸ್‌'ನಲ್ಲಿ ಶುಕ್ರವಾರ( ಜೂ.9)ದಿಂದ ಸಿನಿಮಾ ಪ್ರದರ್ಶನ ಶುರುವಾಗುತ್ತಿದೆ. ಐದು ಸ್ಕ್ರೀನ್‌ಗಳ ಈ ಮಾಲ್‌ನಲ್ಲಿ ಸುಸಜ್ಜಿತ ವ್ಯವಸ್ಥೆ ಯೊಂದಿಗೆ ಸಿನಿಮಾ ನೋಡುವ ಅವಕಾಶ ಪ್ರೇಕ್ಷಕರಿಗೆ ಲಭ್ಯವಿದೆ.

ಆರಂಭಿಕವಾಗಿ ಶುಕ್ರವಾರ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ರಾಜ್‌ಕುಮಾರ' ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅದರೊಂದಿಗೆ ಕನ್ನಡದ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಮಾಗಡಿ ರಸ್ತೆಯ ಪ್ರಮುಖ ಚಿತ್ರಮಂದಿರವೇ ಆಗಿದ್ದ ಪ್ರಮೋದ್‌ ಚಿತ್ರಮಂದಿರ ಸ್ಥಗಿತಗೊಂಡು ನಾಲ್ಕು ವರ್ಷಗಳೇ ಆಗಿದ್ದವು. ಆ ಜಾಗದಲ್ಲಿಯೇ ಈಗ ಜಿಟಿ ವಲ್ಡ್‌ ರ್‍ ಮಾಲ್‌ ನೂತನವಾಗಿ ಎದ್ದು ನಿಂತಿದೆ.

ಸುಸಜ್ಜಿತವಾದ ಮಾಲ್‌ ಇತ್ತೀಚೆಗಷ್ಟೆಆರಂಭವಾಗಿತ್ತಾದರೂ ‘ದಿ ಸಿನಿಮಾಸ್‌'ನಲ್ಲಿ ಸಿನಿಮಾ ಪ್ರದರ್ಶನ ವಾಗುತ್ತಿರುವುದು ಇದೇ ಮೊದಲು. ‘ಜಿ.ಟಿ. ವಲ್ಡ್‌ರ್‍ ಮಾಲ್‌ ನಗರದ ಯಾವುದೇ ಮಾಲ್‌ಗೂ ಕಡಿಮೆ ಇಲ್ಲ ಎನ್ನುತ್ತಾರೆ ಮಾಲೀಕ ಟಿ. ಆನಂದಪ್ಪ. ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ಪ್ರದರ್ಶಕರೆಂದೇ ಹೆಸರಾದವರು ಆನಂದಪ್ಪ. ಪ್ರಮೋದ್‌ ಚಿತ್ರಮಂದಿರವನ್ನು ಕನ್ನಡ ಸಿನಿಮಾಗಳಿಗಾಗಿಯೇ ಮೀಸಲಿಟ್ಟಿದ್ದರು.

Follow Us:
Download App:
  • android
  • ios