ಹುಣಸಮಾರನಹಳ್ಳಿ ಸಂಸ್ಥಾನ ಮಠದ ಉತ್ತರಾಧಿಕಾರಿ ದಯಾನಂದ, ತನ್ನ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಎಚ್ಚೆತ್ತು ತನ್ನ ತಪ್ಪಿನ ಹಿಂದಿರುವವರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾನೆ. ಈಗ ತಲೆ ಮರೆಸಿಕೊಂಡಿರುವ ಸ್ವಾಮಿ ಸ್ಫೋಟಕ ಸುದ್ದಿಯೊಂದಿಗೆ ಪ್ರತ್ಯಕ್ಷವಾಗಿದ್ದಾನೆ.
ಬೆಂಗಳೂರು (ನ.03): ಹುಣಸಮಾರನಹಳ್ಳಿ ಸಂಸ್ಥಾನ ಮಠದ ಉತ್ತರಾಧಿಕಾರಿ ದಯಾನಂದ, ತನ್ನ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಎಚ್ಚೆತ್ತು ತನ್ನ ತಪ್ಪಿನ ಹಿಂದಿರುವವರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾನೆ. ಈಗ ತಲೆ ಮರೆಸಿಕೊಂಡಿರುವ ಸ್ವಾಮಿ ಸ್ಫೋಟಕ ಸುದ್ದಿಯೊಂದಿಗೆ ಪ್ರತ್ಯಕ್ಷವಾಗಿದ್ದಾನೆ.
ದಯಾನಂದನ ರಾಸಲೀಲೆ ಸಿಡಿ ಹಿಂದೆ ಈತನ ಸಂಬಂಧಿಕರೇ ಇದ್ದಾರೆ ಎಂಬ ಸುದ್ದಿ ಭಾರಿ ಪ್ರಮಾಣದಲ್ಲಿ ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲ, ಕಾಮುಕ ಸ್ವಾಮಿಯನ್ನ ಮಠದಿಂದ ಹೊರ ಹಾಕಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದವರೇ ಈತನ ಬಳಿ ಲಕ್ಷ ಲಕ್ಷ ಹಣ ವಸೂಲಿ.ಮಾಡಿದ್ದಾರೆ ಎಂದು ಮಠದ ಪರ ಭಕ್ತರು ಆರೋಪಿಸಿದ್ದರು. ಅದರಂತೆ ದಯಾನಂದ ಸ್ವಾಮಿ ಮಠದ ಭಕ್ತ ಮಹೇಶ, ಬಸವರಾಜ, ಹಾಗೂ ತನ್ನ ಸಂಬಂಧಿ ಹಿಮಾಚಲ ಈ ಸ್ವಾಮಿಯಿಂದ ಲಕ್ಷ ಲಕ್ಷ ಹಣ ಪಡೆದಿಕೊಂಡಿದ್ದಾನೆ ಅಂತಾ ದಯಾನಂದ ಹೇಳಿಕೆ ನೀಡಿದ್ದಾನೆ.
ಇನ್ನೂ ರಾಸಲೀಲೆ ಸಿಡಿ ಬಗ್ಗೆ ದಯಾನಂದನಿಗೆ ಬೆದರಿಕೆ ಒಡಿ 85 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆಯಂತೆ. ಹೀಗಾಗಿ ಯಾರೆಲ್ಲ ಸ್ವಾಮೀಜಿ ಬಗ್ಗೆ ಹಣ ವಸೂಲಿ ಮಾಡಿದ್ದಾರೋ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವುದಾಗಿ ಇತ್ತ ದಯಾನಂದ ಸ್ವಾಮೀಜಿ ಮೂರು ಜನರ ಮೇಲೆ ಆರೋಪಿಸುತ್ತಿದ್ದಂತೆ , ತಮ್ಮ ಮೇಲೆ ಬಂದ ಆರೋಪವನ್ನ ಮೂರು ಜನ ತಳ್ಳಿಹಾಕಿದ್ದಾರೆ.ನಾಪತ್ತೆಯಾಗಿದ ಸ್ವಾಮಿ ಪ್ರತ್ಯಕ್ಷವಾಗಿರೋದು , ಭಾರಿ ಸಂಚಲನ ಸೃಷ್ಟಿದ. ಅಷ್ಟೇ ಅಲ್ಲ ಇನ್ನು ಎರಡೇ ದಿನದಲ್ಲಿ ಸ್ವಾಮಿ ಮಠದ ಬಂದು ರಾಸಲೀಲೆ ಹಿಂದೆ ಇರುವವರ ವಿರುದ್ಧ ದೂರು ನೀಡಲ್ಲಿದ್ದಾರೆ.
