ಬೆಂಗಳೂರು, (ಆ.12) : ಇಂದು [ಸೋಮವಾರ] ನಾಡಿನಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡಿದರು.  ಅದೇ ರೀತಿ ಕರ್ನಾಟಕದಲ್ಲೂ ಸಹ ಹೊಸ ಉಡುಗೆ, ಹಬ್ಬದೂಟ ಮಾಡಿ ಸಡಗರದಿಂದ ಆಚರಿಸಿದರು.

ಬಕ್ರೀದ್ ಪ್ರಯುಕ್ತ ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ನಿವಾಸದಲ್ಲಿ  ಮಧ್ಯಾಹ್ನ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ  ಕಾಂಗ್ರೆಸ್ ನ ಘಟಾನುಘಟಿ ನಾಯರು ಒಟ್ಟಾಗಿ ಪಾಲ್ಗೊಂಡು ಹಬ್ಬದೂಟ ಸವಿದರು. 

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಎಚ್. ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ , ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್,  ಸೇರಿದಂತೆ ಹಲವು ನಾಯಕರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು, ಸ್ವೀಟ್, ವೆಜ್ , ನಾನ್ ವೆಜ್ ನಲ್ಲಿ ತರಹೇವಾರಿ ಭೋಜನ ಸವಿದರು.

ಭೋಜನ ಸವಿಯುತ್ತಿರುವ ಫೋಟೋಗಳನ್ನು ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀದ್ ಅಹಮದ್ ಖಾನ್ ತಮ್ಮ ಫೇಸ್‌ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಬ್ಬದೂಟದ ಜತೆಗೆ ಇನ್ನೊಂದು ವಿಶೇಷ ಅಂದ್ರೆ ಇಂದು ಸಿದ್ದರಾಮಯ್ಯ ಅವರ ಜನ್ಮದಿನ. 

ಈ ಲಂಚ್ ಪಾರ್ಟಿಯಲ್ಲಿ ನಾಯಕರ ಮಧ್ಯೆ ಪ್ರಸ್ತುತ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾತುಕತೆಗಳು ಸಹ ನಡೆದವು.