ವಿಮಾನ ಕ್ಯಾನ್ಸಲ್...! ಬಟ್ಟೆಗೇ ಬೆಂಕಿ ಹಚ್ಚಿಕೊಂಡ ಭೂಪ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Nov 2018, 2:16 PM IST
in islamabad airport man sets luggage on fire after flight gets cancelled
Highlights

ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಒಂದು ಕ್ಯಾನ್ಸಲ್ ಆಗಿದ್ದು, ಇದರಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಬಟ್ಟೆಗೇ ಬೆಂಕಿ ಹಚ್ಚಿಕೊಂಡಿದ್ದಾನೆ. 

ಇಸ್ಲಮಾಬಾದ್[ನ.23]: ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಸ್ಲಮಾಬಾದ್ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಒಂದು ಕ್ಯಾನ್ಸಲ್ ಆಗಿದ್ದು, ಇದರಿಂದ ಕುಪಿತಗೊಂಡ ಆತ ಬಟ್ಟೆಗೇ ಬೆಂಕಿ ಹಚ್ಚಿಕೊಂಡಿದ್ದಾನೆ. 

ಪಾಕಿಸ್ತಾನ ಅಂತಾರಾಷ್ಟ್ರೀಯ ನಿಲ್ದಾಣದ ಪಿಕೆ-607 ವಿಮಾನವು 7 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ಎಲ್ಲಕ್ಕಿಂತ ಮೊದಲು ಕೆಲ ತಾಂತ್ರಿಕ ದೋಷಗಳಿದ್ದ ಕಾರಣ ಪ್ರಯಾಣಿಕರನ್ನು ನಿಲ್ದಾಣದಲ್ಲೇ ಕುಳಿತುಕೊಳ್ಳಲು ಸೂಚಿಸಲಾಯಿತು. ಆದರೆ ಇದಾದ ಕೆಲ ಹೊತ್ತಲ್ಲೇ ವಿಮಾನವನ್ನೇ ಕ್ಯಾನ್ಸಲ್ ಮಾಡಲಾಗಿದೆ. 

ಈ ವಿಚಾರ ತಿಳಿದ ವ್ಯಕ್ತಿಯೊಬ್ಬ ತಾಳ್ಮೆ ಕಳೆದುಕೊಂಡಿದ್ದು, ನಿಲ್ದಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದಾನೆ. ಕೋಪದಲ್ಲಿದ್ದ ಆತ ತನ್ನ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನು ತೆಗೆದು ಅಲ್ಲೇ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಈ ವೇಳೆ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಬೆಂಕಿ ಆರಿಸಲು ಯತ್ನಿಸಿದ್ದಾನೆ, ಆದರೆ ಈ ಬೆಂಕಿ ಹಚ್ಚಿದ ವ್ಯಕ್ತಿ ಮಾತ್ರ ಆತನಿಗೆ ದನ್ನು ಆರಿಸಲು ಬಿಟ್ಟಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಳಿಕ ನಾಗರಿಕ ವಿಮಾನ ಪ್ರಾಧಿಕಾರವು ಬೆಂಕಿ ಆರಿಸಲು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಈ ನಡುವೆ ವ್ಯಕ್ತಿಯನ್ನು ಸಮಾಧಾನಗೊಳಿಸಲು ಹಲವಾರು ಮಂದಿ ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಗಳಲ್ಲಿ ಈ ವಿಡಿಯೋ ಶೇರ್ ಆಗುತ್ತಿದೆ.

loader