Asianet Suvarna News Asianet Suvarna News

ಮೊಬೈಲ್‌ ಕರೆಗೆ ಗಂಟೆಗೆ 1000 ರು.?

ದೂರವಾಣಿ ಕರೆ ಹಾಗೂ ಇಂಟರ್ನೆಟ್‌ ಬ್ರೌಸ್‌ ಮಾಡುವ ಸೇವೆ ಆರಂಭಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ದೂರಸಂಪರ್ಕ ಇಲಾಖೆ ಅಕ್ಟೋಬರ್‌ನಿಂದ ಆರಂಭಿಸಲಿದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಒದಗಲಿದ್ದು,  ಅರ್ಧಗಂಟೆಗೆ 500 ರು. ಹಾಗೂ ಒಂದು ತಾಸಿಗೆ 1000 ರು. ದರ ನಿಗದಿಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

In Flight Calls Internet Set To Take Off From October
Author
Bengaluru, First Published Sep 9, 2018, 12:08 PM IST

ನವದೆಹಲಿ: ವಿಮಾನ ಪ್ರಯಾಣ ಮಾಡುತ್ತಿರುವಾಗ ದೂರವಾಣಿ ಕರೆ ಹಾಗೂ ಇಂಟರ್ನೆಟ್‌ ಬ್ರೌಸ್‌ ಮಾಡುವ ಸೇವೆ ಆರಂಭಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ದೂರಸಂಪರ್ಕ ಇಲಾಖೆ ಅಕ್ಟೋಬರ್‌ನಿಂದ ಆರಂಭಿಸಲಿದೆ. 

ಅದಾದ ನಂತರ ಕೆಲವೇ ದಿನಗಳಲ್ಲಿ ಪ್ರಯಾಣಿಕರಿಗೂ ಈ ಸೇವೆ ಲಭ್ಯವಾಗಲಿದೆ. ಆದರೆ ಇದಕ್ಕೆ ವಿಮಾನ ಪ್ರಯಾಣಿಕರು ಹಣ ಪಾವತಿಸಬೇಕಾಗುತ್ತದೆ. ವಿಮಾನ ಕಂಪನಿಗಳು ಅರ್ಧಗಂಟೆಗೆ 500 ರು. ಹಾಗೂ ಒಂದು ತಾಸಿಗೆ 1000 ರು. ದರ ನಿಗದಿಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಸದ್ಯ ವಿಮಾನದೊಳಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆ ನಿಷಿದ್ಧವಿದೆ. ಮೊಬೈಲ್‌ ಬಳಕೆ ಹೆಚ್ಚಿರುವ ಈ ದಿನಮಾನಗಳಲ್ಲಿ ಆ ಸೇವೆಗೆ ಅವಕಾಶ ಕಲ್ಪಿಸಲು ವಿಮಾನದೊಳಗಣ ಸಂಪರ್ಕ ವ್ಯವಸ್ಥೆಯನ್ನು ವಿಮಾನ ಕಂಪನಿಗಳು ರೂಪಿಸಿಕೊಳ್ಳಲು ಸರ್ಕಾರ ಅನುಮತಿ ನೀಡಲುದ್ದೇಶಿಸಿದೆ. ಆದರೆ ಆ ವ್ಯವಸ್ಥೆ ಅಳವಡಿಕೆಗೆ ಪ್ರತಿ ವಿಮಾನಕ್ಕೂ 36ರಿಂದ 72 ಲಕ್ಷ ರು.ವರೆಗೂ ವೆಚ್ಚವಾಗಲಿದೆ. ಆ ವೆಚ್ಚವನ್ನು ಪ್ರಯಾಣಿಕರಿಗೆ ಬಳಕೆ ಶುಲ್ಕದ ರೂಪದಲ್ಲಿ ಕಂಪನಿಗಳು ಹೇರಲಿವೆ.

Follow Us:
Download App:
  • android
  • ios