ಗಣರಾಜ್ಯೋತ್ಸವ ದಿನವಾದ ಜ.26ರಿಂದ ಕಮಲ್ ಹಾಸನ್ ಅವರು ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಚೆನ್ನೈ: ಪ್ರಸಿದ್ಧ ನಟರಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದಿಂದ ತಮಿಳುನಾಡಿನ ರಾಜಕಾರಣ ದಿನೇದಿನೇ ರಂಗೇರುತ್ತಿದೆ. ಗಣರಾಜ್ಯೋತ್ಸವ ದಿನವಾದ ಜ.26ರಿಂದ ಕಮಲ್ ಹಾಸನ್ ಅವರು ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ಬಯಲಿಗೆಳೆಯುವವರಿಗಾಗಿ ಮೊಬೈಲ್ ಆ್ಯಪ್‌ವೊಂದನ್ನು ಇದೇ ತಿಂಗಳು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಜ.26ರಿಂದ ಜನರನ್ನು ಭೇಟಿ ಮಾಡುವ ಪ್ರಯಾಣ ಆರಂಭವಾಗಲಿದೆ. ಕಾರ್ಯಕ್ರಮ ಪಟ್ಟಿಯ ಕುರಿತ ಮಾಹಿತಿ ‘ಆನಂದ ವಿಕಟನ್’ ವಾರಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಲಭ್ಯವಿರುತ್ತದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಕಮಲ್ ತಿಳಿಸಿದ್ದಾರೆ.