ಈದ್ ಮುಬಾರಕ್: 50 ಯುವಕರಿಗೆ ಅಪ್ಪುಗೆ ಭಾಗ್ಯ..!

In departure from Eid tradition, girl hugs men at UP mall
Highlights

ಈದ್ ವೇಳೆ ಯುವತಿಯಿಂದ ವಿಶೇಷ ಗಿಫ್ಟ್

ಸಾವರ್ವಜನಿಕವಾಗಿ 50 ಯುವಕರಿಗೆ ಅಪ್ಪುಗೆ

ಯುವಕರನ್ನು ಅಪ್ಪಿಕೊಂಡು ಹಬ್ಬದ ವಿಶ್ ಮಾಡಿದ ಯುವತಿ

ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಘಟನೆ      

ಮೊರಾದಾಬಾದ್(ಜೂ.19): ರಂಜಾನ್ ಹಬ್ಬದ ಸಂದರ್ಭದಲ್ಲಿ ಉತ್ತರಪ್ರದೇಶದ ಮೊರಾದಾಬಾದ್ ಯುವಕರು ತುಸು ಹೆಚ್ಚೇ ಸಂಭ್ರಮದಲ್ಲಿದ್ದರು. ಅವರ ಸಂಭ್ರಮಾಚರಣೆಗೆ ಕಾರಣ ಓರ್ವ ಅನಾಮಿಕ ಯುವತಿ ಎಂಬುದು ಮತ್ತೊಂದು ವಿಶೇಷ.

ಹೌದು, ಈದ್ ಹಬ್ಬದ ಪ್ರಯುಕ್ತ ಮೊರಾದಾಬಾದ್ ನ ಮಾಲ್ ವೊಂದರಲ್ಲಿ ಅನಾಮಿಕ ಯುವತಿಯೋರ್ವಳು ಸುಮಾರು 50 ಜನ ಯುವಕರನ್ನು ಅಪ್ಪಿಕೊಂಡು ಶುಭಾಷಯ ತಿಳಿಸಿದ್ದಾಳೆ. ಈ ಯುವತಿ ಮಾಲ್ ಹೊರಗಡೆ ಯುವಕರನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಿದ್ದಂತೇ ಜನಜಂಗುಳಿ ಸೇರಿದೆ.

ಒಬ್ಬರಾದ ಮೇಲೊಬ್ಬರಂತೆ ಸುಮಾರು 50 ಯುವಕರನ್ನು ಅಪ್ಪಿಕೊಂಡು ಹಬ್ಬದ ಶುಭಾಷಯ ತಿಳಿದ್ದಾಳೆ ಈ ಯುವತಿ. ಇನ್ನು ಯುವತಿಯನ್ನು ಅಪ್ಪಿಕೊಳ್ಳಲು ಯುವಕರು ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ಪರ ಪುರುಷರನ್ನು ಅಪ್ಪಿಕೊಳ್ಳುವುದು ನಿಷಿದ್ದ. ಆದರೆ ಈ ಯುವತಿ ಹೀಗೆ ಸಾರ್ವಜನಿಕವಾಗಿ ಯುವಕರನ್ನು ಅಪ್ಪಿಕೊಂಡಿರುವುದು ಸಂಪ್ರದಾಯವಾದಿಗಳ ಕಣರ್ಣಣು ಕೆಂಪಾಗಿಸಿದೆ. ಇದೇ ವೇಳೆ ಈ ಯುವತಿಯ ಧೈರ್ಯವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ.

loader