ಟೆಲ್‌ ಅವೀವ್‌[ಜು.29]: ಇತ್ತೀಚೆಗೆ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಎಲ್ಲೆಡೆ ನರೇಂದ್ರ ಮೋದಿ ಅವರ ಪೋಸ್ಟರ್‌ಗಳು ರಾರಾಜಿಸಿದ್ದವು. ಅಚ್ಚರಿಯ ವಿಷಯವೆಂದರೆ ಇದೀಗ ಇಸ್ರೇಲ್‌ನಲ್ಲೂ ಸಂಸತ್ತಿಗೆ ಚುನಾವಣೆ ನಡೆಯುತ್ತಿದ್ದು, ಅಲ್ಲೂ ಮೋದಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಅರೆ, ಇದೇನಿದು, ಮೋದಿ ಇಸ್ರೇಲ್‌ನಲ್ಲೂ ಚುನಾವಣೆಗೆ ನಿಂತರಾ ಎಂದು ಅಚ್ಚರಿಯಾಗಬೇಡಿ. ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ, ಇಸ್ರೇಲ್‌ ಪ್ರಧಾನಿ ಬೆಂಜಮಿತ್‌ ನೆತನ್ಯಾಹು, ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ವಿವಿಧ ದೇಶಗಳ ಜೊತೆ ತಾವು ಈ ಹಿಂದೆ ಪ್ರಧಾನಿಯಾಗಿದ್ದ ಕೈಗೊಂಡ ಸಾಧನೆಗಳನ್ನು ವಿವರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ವಿದೇಶಿ ಗಣ್ಯರ ಜೊತೆ ಇರುವ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ.