Asianet Suvarna News Asianet Suvarna News

ಛತ್ತೀಸ್‌ಗಡದ ಈ ಗ್ರಾಮದಲ್ಲಿರುವುದು ಕೇವಲ 4 ಮಂದಿ ಮತದಾರರು!

ಭರತ್ಪುರ್-ಸೋನ್ಹಾಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಶೆರಾಂದರ್ ಗ್ರಾಮದ ಪೋಲಿಂಗ್ ಬೂತ್ ನಂಬರ್ 143ರಲ್ಲಿ ಕೇವಲ ನಾಲ್ಕು ಮತದಾರರಿದ್ದು, ಇವರಲ್ಲಿ ಮೂವರು ಒಂದೇ ಕುಟುಂಬದ ಸದಸ್ಯರು ಎಂಬುವುದು ಮತ್ತಷ್ಟು ಚಕಿತಗೊಳಿಸುವ ವಿಚಾರವಾಗಿದೆ. 

In a village in bharatpur sonhat constituency there are only 4 voter
Author
Chhattisgarh, First Published Nov 7, 2018, 4:10 PM IST

ರಾಯ್ಪುರ[ನ. 07]: ಛತ್ತೀಸ್‌ಗಡ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚುನಾವಣಾ ಆಯೋಗವು ಮತದಾರರ ಸಂಖ್ಯೆ ಇದ್ದರೂ ಮತದಾನ ಜಾಗೃತಿ ಮೂಡಿಸುವಲ್ಲಿ ತಲ್ಲೀನವಾಗಿದೆ. ಯಾವೊಬ್ಬ ಮತದಾರನ ಓಟು ಹಾಳಾಗಬಾರದೆಂಬ ನಿಟ್ಟಿನಲ್ಲಿ ಆಯೋಗವು ಈ ಅಭಿಯಾನ ಆರಂಭಿಸಿದೆ.

ಹೀಗೆ ಜನರಿಗೆ ಮತದನದ ಮಹತ್ವ ತಿಳಿಸಿಕೊಡುವ ಸಂದರ್ಭದಲ್ಲಿ ಛತ್ತೀಸ್‌ಗಡದ ಗ್ರಾಮವೊಂದರಲ್ಲಿ ಕೇವಲ ನಾಲ್ಕೇ ಮಂದಿ ಮತದಾರರಿರುವ ವಿಚಾರ ಬೆಳಕಿಗೆ ಬಂದಿದೆ. ಭರತ್ಪುರ್-ಸೋನ್ಹಾಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಶೆರಾಂದರ್ ಗ್ರಾಮದ ಪೋಲಿಂಗ್ ಬೂತ್ ನಂಬರ್ 143ರಲ್ಲಿ ಕೇವಲ ನಾಲ್ಕು ಮತದಾರರಿದ್ದು, ಇವರಲ್ಲಿ ಮೂವರು ಒಂದೇ ಕುಟುಂಬದ ಸದಸ್ಯರು ಎಂಬುವುದು ಮತ್ತಷ್ಟು ಚಕಿತಗೊಳಿಸುವ ವಿಚಾರವಾಗಿದೆ. 

ಚುನಾವಣೆಗೂ ಒಂದು ದಿನ ಮೊದಲೇ ಈ ಗ್ರಾಮಕ್ಕೆ ಪೋಲಿಂಗ್ ಅಧಿಕಾರಿಗಳು ತೆರಳಲಿದ್ದು, ಇಲ್ಲಿ ಓಟಿಂಗ್ ಬೂತ್ ನಿರ್ಮಿಸಿ ನಾಲ್ವರು ಮತದಾರರಿಗೆ ಮತ ಹಾಕಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಲ್ಲಿನ ಚುನಾವಣಾಧಿಕಾರಿ ಎನ್. ಕೆ. ದುಗ್ಗಾ ತಿಳಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿರುವ ಶೆರಾಂದರ್ ಗ್ರಾಮಕ್ಕೆ ತಲುಪುವ ದಾರಿಯೂ ಬಹಳ ದುರ್ಗಮವಾಗಿದೆ. ಚುನಾವಣಾ ಅಧಿಕಾರಿಗಳು ಕಲ್ಲು ಬಂಡೆಗಳಿರುವ ಬೆಟ್ಟ- ಗುಡ್ಡಗಳನ್ನು ಹತ್ತಿ, ನದಿಗಳನ್ನು ದಾಟಬೇಕಿದೆ. ಗ್ರಾಮವು ಮುಖ್ಯ ರಸ್ತೆಯಿಂದ ಸುಮಾರು 15 ಕಿ. ಮೀಟರ್ ದೂರದಲ್ಲಿದ್ದು, ಅಧಿಕಾರಿಗಳಿಗೆ ಪೊಲೀಂಗ್ ಬೂತ್ ನಿರ್ಮಿಸುವುದೂ ಒಂದು ಸವಾಲಾಗಿದೆ.

ಛತ್ತೀಸ್‌ಗಡ್‌ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 18 ರಂದು ರಾಜ್ಯದ ದಕ್ಷಿಣ ಭಾಗದಲ್ಲಿರುವ 18 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆದರೆ, ಎರಡನೇ ಹಂತದ ಚುನಾವಣೆ ನವೆಂಬರ್ 20 ರಂದು ನಡೆಯಲಿದೆ.

Follow Us:
Download App:
  • android
  • ios