ಇಸ್ಲಾಮಾಬಾದ್‌[ಆ.20]: ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಆರಂಭದಲ್ಲೇ ವೆಚ್ಚಗಳನ್ನು  ಕಡಿತ ಮಾಡುವ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. 

ಇದರ ಭಾಗವಾಗಿ ತಾವೇ ಪಾಕ್ ಪ್ರಧಾನಿ ವಾಸಿಸುವ ಬಂಗಲೆ, 524 ಸೇವಕರು ಹಾಗೂ 80 ಐಷಾರಾಮಿ ಕಾರುಗಳನ್ನು ಬೇಡ ಎಂದಿದ್ದಾರೆ. ಪ್ರಧಾನಿಗಳ ಅಧಿಕೃತ ನಿವಾಸದ ಬದಲಿಗೆ ತಮ್ಮ ಸೇನಾ ಕಾರ್ಯದರ್ಶಿಯ ಮೂರು ಕೋಣೆಗಳ ಮನೆಯಲ್ಲಿ ವಾಸ್ತವ್ಯ ಆರಂಭಿಸಲಿದ್ದಾರೆ. 80 ಕಾರುಗಳ ಪೈಕಿ 2ನ್ನು ಮಾತ್ರ ಬಳಸಲು ನಿರ್ಧರಿಸಿದ್ದಾರೆ.

ಪಾಕ್ ಪ್ರಧಾನಿಗೆ 33 ಬುಲೆಟ್‌ಪ್ರೂಫ್‌ ಕಾರುಗಳಿವೆ. ಜತೆಗೆ ಹೆಲಿಕಾಪ್ಟರ್‌ಗಳು, ಏರೋಪ್ಲೇನ್‌ಗಳು ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಬುಲೆಟ್‌ ಪ್ರೂಫ್‌ ಕಾರುಗಳನ್ನು ಉದ್ಯಮಿಗಳಿಗೆ ಮಾರಿ ಬೊಕ್ಕಸಕ್ಕೆ ಹಣ ತುಂಬಿಸುತ್ತಾರಂತೆ.