ಒಂದು ಸ್ಥಾನ ಹೆಚ್ಚು ಕೇಳಿದರೂ ಎನ್ ಡಿಎ ಜೊತೆ ಕೈಜೋಡಿಸಲ್ಲ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 1:04 PM IST
Important that the BJP treat their allies with kid gloves
Highlights

ಬಿಜೆಪಿ ಒಂದು ಸ್ಥಾನವನ್ನು ಹೆಚ್ಚು ಹೇಳಿದರೂ ಕೂಡ ಅದಕ್ಕೆ ನಮ್ಮ ನಿರಾಕರಣೆ ಇದೆ ಎಂದು ಶಿರೋಮಣಿ ಅಕಾಲಿ ದಳದ ಮುಖಂಡ ಗುಜ್ರಾಲ್ ಹೇಳಿದ್ದು, ಈ ಮೂಲಕ ಎನ್ ಡಿಎ ಒಕ್ಕೂಟದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನವದೆಹಲಿ :  ಸದ್ಯ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ವಾಜಪೇಯಿ ಅವರ ಆಡಳಿತದ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಎಸ್ ಎಡಿ  ಮುಖಂಡ  ನರೇಶ್ ಗುಜ್ರಾಲ್ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಈ ರೀತಿಯಲ್ಲಿ ನಡೆದುಕೊಳ್ಳುವುದು ಅಗತ್ಯ ಎಂದಿದ್ದಾರೆ. 

ರಾಜ್ಯಸಭಾ ಸದಸ್ಯರಾಗಿರುವ ಗುಜ್ರಾಲ್  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಗೆಲುವು ಅದು ಚುನಾವಣೆ ಪೂರ್ವದಲ್ಲಿ ಹೇಗೆ ಮೈತ್ರಿಯನ್ನು ನಿರ್ವಹಣೆ ಮಾಡುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. 

ಹೇಗೆ ತಮ್ಮ ಮೈತ್ರಿಯಲ್ಲಿರುವ ಪಕ್ಷಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಅತೀ ಮುಖ್ಯವಾಗಿರುತ್ತದೆ.  ಅತ್ಯಂತ ಹೆಚ್ಚಿನ ಕಾಳಜಿಯಿಂದ ತಮ್ಮ ಮೖತ್ರಿ ಪಕ್ಷಗಳನ್ನು ನಿರ್ವಹಣೆ ಮಾಡುವುದು ಅತೀ ಅಗತ್ಯ ಎಂದಿದ್ದಾರೆ. 

ಅಲ್ಲದೇ ಶಿವ ಸೇನೆ ಎನ್ ಡಿಎ ಪಡೆಯೊಂದಿಗೆ  ಮುಂದುವರಿಯಲಿದೆ. ಅಲ್ಲದೇ ಹೆಚ್ಚಿನ ಸ್ಥಾನಗಳನ್ನೂ ಕೂಡ ಅದು ಬಯಸುವುದಿಲ್ಲ. ಇನ್ನು ನಿತೀಶ್ ಕುಮಾರ್ ಅವರೂ ಕೂಡ ತಮಗೆ ಬೇಕಾದಷ್ಟು ಸ್ಥಾನಗಳನ್ನು ಕೇಳೇ ಕೇಳುತ್ತಾರೆ. ನಮ್ಮ ಬಳಿ ಒಂದು ಸ್ಥಾನ ಬಿಟ್ಟುಕೊಡಲು ಕೇಳಿದರೂ ಕೂಡ ಅದು ಸಾಧ್ಯವಿಲ್ಲ ಎಂದು ಗುಜ್ರಾಲ್ ಹೇಳಿದ್ದಾರೆ. 

loader