‘ನನಗೆ ಯಾವುದೇ ದೊಡ್ಡ ರೋಗ ಬಂದಿಲ್ಲ. ಕಫ ಕಟ್ಟಿದೆ, ಕೆಮ್ಮು. ಹೀಗಾಗಿ ಸ್ವಲ್ಪ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದೆ. ಈ ಕಾರಣಕ್ಕಾಗಿ ನಾನು ಸಿಂಗಾಪುರಕ್ಕೆ ಹೋಗಿದ್ದೆ'.- ಹೆಚ್'ಡಿ ಕುಮಾರಸ್ವಾಮಿ
ಬೆಂಗಳೂರು(ಆ.16): ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. 15 ರಿಂದ 20 ದಿನ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ದೊಡ್ಡ ರೋಗ ಬಂದಿಲ್ಲ: ‘ನನಗೆ ಯಾವುದೇ ದೊಡ್ಡ ರೋಗ ಬಂದಿಲ್ಲ. ಕಫ ಕಟ್ಟಿದೆ, ಕೆಮ್ಮು. ಹೀಗಾಗಿ ಸ್ವಲ್ಪ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದೆ. ಈ ಕಾರಣಕ್ಕಾಗಿ ನಾನು ಸಿಂಗಾಪುರಕ್ಕೆ ಹೋಗಿದ್ದೆ. ಆದರೆ, ಕೆಲವರು ಅದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಕೆಮ್ಮು ಸುಧಾರಿಸಿದ ನಂತರ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಪಕ್ಷ ಬಲವರ್ಧನೆ ಮಾಡುವ ಮತ್ತು ಅಧಿಕಾರಕ್ಕೆ ತರುವ ಸಂಕಲ್ಪದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.
