ನಾನೀಗ ಆರೋಪ ಮುಕ್ತನಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುವಂತೆ ಧೈರ್ಯದಿಂದ ಕೇಳುತ್ತೇನೆ ಎಂದು ಹಾಲಪ್ಪ ತಿಳಿಸಿದರು.

ಮೈಸೂರು(ಆ.21): ನಾನೀಗ ಆರೋಪಮುಕ್ತನಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವಂತೆ ಧೈರ್ಯದಿಂದ ಕೇಳುತ್ತೇನೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಕ್ಲೀನ್'ಚಿಟ್ ಪಡೆದಿರುವ ಹಿನ್ನೆಲೆಯಲ್ಲಿ ಹಾಲಪ್ಪ ದಂಪತಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ಎಸಿಬಿ ಅಸ್ತ್ರ ಪ್ರಯೋಗಿಸಿರುವುದು ರಾಜಕೀಯ ಪ್ರೇರಿತ, ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತೇವೆ. ನಾನೀಗ ಆರೋಪ ಮುಕ್ತನಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುವಂತೆ ಧೈರ್ಯದಿಂದ ಕೇಳುತ್ತೇನೆ ಎಂದು ಹಾಲಪ್ಪ ತಿಳಿಸಿದರು.

ಅತ್ಯಾಚಾರ ಪ್ರಕರಣದಲ್ಲಿ ಕಾಣದ ಕೈಗಳು ನನ್ನನ್ನು ಸಿಕ್ಕಿಸಿದ್ದವು. ಆ ಸಂದರ್ಭದಲ್ಲಿ ಶ್ರೀಗಳು ನನಗೆ ಧೈರ್ಯ ತುಂಬಿದ್ದರು. ಈಗ ಆರೋಪ ಮುಕ್ತನಾಗಿದ್ದು ಶ್ರೀಗಳ ಆಶೀರ್ವಾದ ಪಡೆಯುವುದಕ್ಕೆ ಬಂದಿದ್ದೆ ಎಂದರು.