ನಾನು, ಮಗ ಚುನಾವಣೆಗೆ ನಿಲ್ಲುತ್ತಿಲ್ಲ: ಸಚಿವ ಸೀತಾರಾಂ

First Published 16, Mar 2018, 10:50 AM IST
Im Not Contest Election Says MR Seetharam
Highlights

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ನನ್ನ ಪುತ್ರ ಸ್ಪರ್ಧೆ ಮಾಡುವುದಿಲ್ಲ. ನಾನು ಹಾಗೂ ನನ್ನ ಪುತ್ರ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಂ.ಆರ್‌. ಸೀತಾರಾಂ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ನನ್ನ ಪುತ್ರ ಸ್ಪರ್ಧೆ ಮಾಡುವುದಿಲ್ಲ. ನಾನು ಹಾಗೂ ನನ್ನ ಪುತ್ರ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಂ.ಆರ್‌. ಸೀತಾರಾಂ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ನನ್ನ ಮಗ ಟಿಕೆಟ್‌ ಇಬ್ಬರೂ ಆಕಾಂಕ್ಷಿಯಲ್ಲ. ನನ್ನ ಪುತ್ರ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಲಾಗಿತ್ತು. ಆದರೆ ಮುಂದಿನ ಐದು ವರ್ಷ ಯುವ ಕಾಂಗ್ರೆಸ್ಸಿನಲ್ಲಿಯೇ ಕೆಲಸ ಮಾಡುವಂತೆ ಹೇಳಿದ್ದೇನೆ.

ಪಕ್ಷಕ್ಕಾಗಿ ದುಡಿದ ಅನುಭವ ಬಂದ ಮೇಲೆ ಸ್ಪರ್ಧಿಸಲಿ ಎಂಬ ಉದ್ದೇಶದಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸುವಂತೆಯೂ ತಿಳಿಸಿಲ್ಲ ಎಂದು ಹೇಳಿದರು.

loader