ಚುನಾವಣೆ ಸ್ಪರ್ಧೆ ಬಗ್ಗೆ ಕೆ.ಸ್ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪ್ರತಿಕ್ರಿಯೆ ಏನು..?

First Published 6, Mar 2018, 1:29 PM IST
Im Not Contest Election Says Darshan Puttannaiah
Highlights

ಪುಟ್ಟಣ್ಣಯ್ಯ ಪುತ್ರ  ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರದ ಬಗ್ಗೆ ಸ್ವತಃ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವ ರಾಜಕೀಯ ಪಕ್ಷದ ನಾಯಕರನ್ನೂ ಕೂಡ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಸುಳ್ಳು.

ಮಂಡ್ಯ : ಪುಟ್ಟಣ್ಣಯ್ಯ ಪುತ್ರ  ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರದ ಬಗ್ಗೆ ಸ್ವತಃ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವ ರಾಜಕೀಯ ಪಕ್ಷದ ನಾಯಕರನ್ನೂ ಕೂಡ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಸುಳ್ಳು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಆಲೋಚನೆಯನ್ನೂ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ನನ್ನನ್ನು ಸಂಪರ್ಕಿಸಿಲ್ಲ ಎಂದು ಪುಟ್ಟಣ್ಣಯ್ಯ ಪುತ್ರ ದರ್ಶನ್ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು  ರೈತ ಮುಖಂಡರು ಬಯಸಿದರೆ ಸ್ವರಾಜ್ ಇಂಡಿಯಾದಿಂದ ಸ್ಪರ್ಧೆ ಮಾಡುತ್ತೇವೆ.

ನಾನು ವಿದೇಶಕ್ಕೆ ಹೋಗುವುದಿಲ್ಲ. ತಂದೆಯ ಹೋರಾಟವನ್ನೇ ಮುಂದುವರಿಸುವೆ ಎಂದು ಹಸಿರು ನಮನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

loader