ಭಾರತ-ಪಾಕಿಸ್ತಾನವು 18 ವರ್ಷಗಳ ನಂತರ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ.  18 ವರ್ಷಗಳ ಹಿಂದೆ ನೌಕಾ ವಿಮಾನದ ಪ್ರಕರಣದಲ್ಲಿ ಉಭಯ ದೇಶಗಳು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದವು.

ನವದೆಹಲಿ (ಮೇ.14): ಭಾರತ-ಪಾಕಿಸ್ತಾನವು 18 ವರ್ಷಗಳ ನಂತರ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. 18 ವರ್ಷಗಳ ಹಿಂದೆ ನೌಕಾ ವಿಮಾನದ ಪ್ರಕರಣದಲ್ಲಿ ಉಭಯ ದೇಶಗಳು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದವು.

ನೆದರ್’ಲ್ಯಾಂಡ್’ನ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಾಳೆ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಯಲಿದೆ. ಉಭಯ ದೇಶಗಳಿಗೂ ಪ್ರಸ್ತುತರಿರಲು ಕೇಳಿಕೊಳ್ಳಲಾಗಿದೆ.

ಕುಲಭೂಷಣ್ ಜಾಧವ್’ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಪಾಕಿಸ್ತಾನ ನಿರಾಕರಿಸಿರುವುದನ್ನು ಪ್ರಶ್ನಿಸಿ ಭಾರತ ವಿಶ್ವಸಂಸ್ಥೆ ಮುಂದೆ ಮೇ.08 ರಂದು ಅರ್ಜಿ ಸಲ್ಲಿಸಿತ್ತು.

ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯದ ಆರೋಪದ ಮೇರೆಗೆ ಪಾಕಿಸ್ತಾನ ಕುಲಭೂಷಣ್ ಜಾಧವ್’ಗೆ ಗಲ್ಲುಶಿಕ್ಷೆ ನೀಡಿತ್ತು. ಆಗ ಭಾರತ ಅವರಿಗೆ ರಾಜತಾಂತ್ರಿಕ ನೆರವು ನೀಡಲು 16 ಬಾರಿ ಕೇಳಿಕೊಂಡರೂ ಪಾಕಿಸ್ತಾನ ಒಪ್ಪಲಿಲ್ಲ. ಜೊತೆಗೆ ಜಾಧವ್ ಕುಟುಂಬ ಸಲ್ಲಿಸಿದ್ದ ವೀಸಾಗೂ ಸಹ ಪ್ರತಿಕ್ರಿಯೆ ನೀಡಲಿಲ್ಲ.