ಬಹುನಿರೀಕ್ಷಿತ ಬಜೆಟನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಮಂಡನೆ ಮಾಡುರುವುದನ್ನು ಇಡೀ ದೇಶ ನೋಡಿದೆ. ಕೆಲವರು ಜನಪರವಾಗಿದೆ ಎಂದರೆ ಇನ್ನು ಕೆಲವರು ಜನವಿರೋಧಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಜೆಟ್ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಅರುಣ್ ಜೇಟ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಸದ್ಯ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾದೀತು!
ನವದೆಹಲಿ (ಫೆ.01): ಬಹುನಿರೀಕ್ಷಿತ ಬಜೆಟನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಮಂಡನೆ ಮಾಡುರುವುದನ್ನು ಇಡೀ ದೇಶ ನೋಡಿದೆ. ಕೆಲವರು ಜನಪರವಾಗಿದೆ ಎಂದರೆ ಇನ್ನು ಕೆಲವರು ಜನವಿರೋಧಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಜೆಟ್ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಅರುಣ್ ಜೇಟ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಸದ್ಯ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾದೀತು!
* ದೇಶದಲ್ಲಿ ಒಬ್ಬ ದುಡಿದು 130 ಜನರನ್ನು ಸಾಕಬೇಕು ಇದು ಭಾರತೀಯ ಅರ್ಥವ್ಯವಸ್ಥೆಯ ಸ್ಥಿತಿ
* 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು ಕೇವಲ 24 ಲಕ್ಷ ಜನ
* ಪ್ರತಿ ವರ್ಷ ದೇಶದಲ್ಲಿ ಸರಾಸರಿ 30 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ ಆದರೆ, 5ರಿಂದ 10 ಲಕ್ಷ ಆದಾಯ ಇರುವವರ ಸಂಖ್ಯೆ ಕೇವಲ 52 ಲಕ್ಷ
* 2016ರಲ್ಲಿ ವಿದೇಶ ಪ್ರವಾಸಕ್ಕೆ ಹೋದವರ ಸಂಖ್ಯೆ 2 ಕೋಟಿ ಆದರೆ, 50 ಲಕ್ಷಕ್ಕಿಂತ ಹೆಚ್ಚು ಆದಾಯದಾರರು ಕೇವಲ ಒಂದು ಲಕ್ಷದ 72 ಸಾವಿರ
* ಒಟ್ಟು ಟ್ಯಾಕ್ಸ್ ಕಟ್ಟುವವರ ಸಂಖ್ಯೆಗಿಂತ ಕಾರು ಮಾಲೀಕರ ಸಂಖ್ಯೆ ಹೆಚ್ಚು
* ಒಟ್ಟು ಟ್ಯಾಕ್ಸ್ ಕಟ್ಟುವವರ ಸಂಖ್ಯೆ 1 ಕೋಟಿ 16 ಲಕ್ಷ ಜನ ಮಾತ್ರ
* ದೇಶದ ಜನಸಂಖ್ಯೆ 130 ಕೋಟಿಗಿಂತಲೂ ಹೆಚ್ಚು
* ಒಬ್ಬನ ತೆರಿಗೆಯಲ್ಲಿ ಸರಾಸರಿ 130 ಜನರ ಉದ್ದಾರ ಆಗಬೇಕು
