ಉತ್ತರ ಪತ್ರಿಕೆಯಲ್ಲಿ ದೇವರ ಹೆಸರು ಬರೆದರೆ ಡಿಬಾರ್‌!

If Write God Name in Answer Paper Student will be Debar
Highlights

 ಪರೀಕ್ಷೆ ವೇಳೆ ಉತ್ತರ ಪ್ರತಿಕೆಗಳಲ್ಲಿ ದೇವರ ಹೆಸರು ಅಥವಾ ಯಾವುದೇ ಧಾರ್ಮಿಕ ಚಿಹ್ನೆ ಬರೆದರೆ ಅಂಥ ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ.

ಬೆಂಗಳೂರು (ಫೆ.07): ಪರೀಕ್ಷೆ ವೇಳೆ ಉತ್ತರ ಪ್ರತಿಕೆಗಳಲ್ಲಿ ದೇವರ ಹೆಸರು ಅಥವಾ ಯಾವುದೇ ಧಾರ್ಮಿಕ ಚಿಹ್ನೆ ಬರೆದರೆ ಅಂಥ ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ.

ಮಂಗಳವಾರದಿಂದ ರಾಜ್ಯದಲ್ಲಿ 10-12ನೇ ತರಗತಿ ಪರೀಕ್ಷೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈ ಎಚ್ಚರಿಕೆ ನೀಡಿದೆ. ಕೆಲವು ವಿದ್ಯಾರ್ಥಿಗಳು, ಮೊದಲಿಗೆ ದೇವರು ಹೆಸರು ಬರೆದರೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಹೊಂದಿರುತ್ತಾರೆ. ಇನ್ನು ಕೆಲ ವಿದ್ಯಾರ್ಥಿಗಳು, ದೇವರ ಹೆಸರು ಬರೆದರೆ ಮೌಲ್ಯಮಾಪಕರು ಫೇಲ್‌ ಮಾಡುವ ಸಾಧ್ಯತೆ ಕಡಿಮೆ ಎಂಬ ನಿರೀಕ್ಷೆಯಿಂದ ಹೊಂದಿರುತ್ತಾರೆ. ಆದರೆ ಇಂಥ ಕ್ರಮ ಕಾನೂನು ಬಾಹಿರ ಎಂದು ಸರ್ಕಾರ ಸ್ಪಷ್ಪಪಡಿಸಿದೆ.

loader