ರಕ್ಷಣಾ ಮುಖ್ಯಸ್ಥರನ್ನು ಆಯ್ಕೆ ಮಾಡುವಾಗ ಸೇವಾ ಹಿರಿತನವನ್ನು ಮಾನದಂಡವಾಗಿ ಪರಿಗಣಿಸಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪರ್ರಿಕರ್, ಸೇವಾ ಹಿರಿತನವೇ ಮಾನದಂಡವಾದರೆ ಜನ್ಮ ದಿನಾಂಕದ ಆಧಾರದ ಮೇಲೆ ಕಂಪ್ಯೂಟರ್ ಆಯ್ಕೆ ಮಾಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನವದೆಹಲಿ (ಜ.03): ರಕ್ಷಣಾ ಮುಖ್ಯಸ್ಥರನ್ನು ಆಯ್ಕೆ ಮಾಡುವಾಗ ಸೇವಾ ಹಿರಿತನವನ್ನು ಮಾನದಂಡವಾಗಿ ಪರಿಗಣಿಸಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪರ್ರಿಕರ್, ಸೇವಾ ಹಿರಿತನವೇ ಮಾನದಂಡವಾದರೆ ಜನ್ಮ ದಿನಾಂಕದ ಆಧಾರದ ಮೇಲೆ ಕಂಪ್ಯೂಟರ್ ಆಯ್ಕೆ ಮಾಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸೇನಾ ಮುಖ್ಯಸ್ಥರಿಗೆ ಸೇವಾ ಹಿರಿತನವೇ (ಸೀನಿಯಾರಿಟಿ) ಮುಖ್ಯವಾದರೆ ಅವರ ನೇಮಕಕ್ಕೆ ಆಯ್ಕೆ ಸಮಿತಿ, ರಕ್ಷಣಾ ಮಂತ್ರಿ ಅಗತ್ಯವಿಲ್ಲ. ಇದು ಕಂಪ್ಯೂಟರ್ ಕೆಲಸ. ಯಾರು ಸೇನಾ ಮುಖ್ಯಸ್ಥರಾಗಬೇಕು ಎನ್ನುವುದನ್ನು ಜನ್ಮ ದಿನಾಂಕವೇ ನಿರ್ಧರಿಸುತ್ತದೆ ಎಂದು ಮನೋಹರ್ ಪರ್ರಿಕರ್ ಹೇಳಿದ್ದಾರೆ.
ಮೊದಲನೆಯದಾಗಿ ಸೇವಾ ಹಿರಿತನದ ತತ್ವವೆಲ್ಲಿದೆ ಎಂದು ನನಗೆ ಗೊತ್ತಿಲ್ಲ. ಎಲ್ಲಾ ಕಮಾಂಡರ್ ಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಈಗ ಪರಿಗಣಿಸಿರುವ ಎಲ್ಲಾ ಕಮಾಂಡರ್ ಗಳು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆಂದು ನಾನು ಭರವಸೆ ನೀಡುತ್ತೇನೆ. ಹಾಗಾಗಿಯೇ ನಾವು ಮುಂಚಿತವಾಗಿ ನಿರ್ಧಾರವನ್ನು ತೆಗೆದುಕೊಂಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
1983 ರಿಂದ ಸೇವಾ ಹಿರಿತನದ ಆಧಾರದ ಮೇಲೆ ಸೇನಾ ಮುಖ್ಯಸ್ಥರನ್ನು ನೇಮಕ ಮಾಡುವ ಸಂಪ್ರದಾಯವನ್ನು ಮುರಿದು ಜನರಲ್ ಬಿಪಿನ್ ರಾವತ್ ರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಕಳೆದ ತಿಂಗಳು ನೇಮಿಸಲಾಯಿತು. ಈ ಪ್ರಕ್ರಿಯೆ ಪ್ರಶ್ನೆಯನ್ನು ಹುಟ್ಟುಹಾಕಿದೆ.
