ಜೀವನ ನಿರ್ವಹಿಸುವಷ್ಟು ವೇತನವಿದ್ದರೆ, ಹೆಂಡತಿಗೆ ಜೀವನಾಂಶವಿಲ್ಲ: ಹೈಕೋರ್ಟ್

ತನ್ನ ಜೀವನ ನಿರ್ವಹಣೆ ಮಾಡುವಷ್ಟು ಸಂಬಳ ಹೊಂದಿರುವ ಮಹಿಳೆ ಗಂಡನಿಂದ ಜೀವನಾಂಶ ಕೇಳುವಂತಿಲ್ಲ| ಮಹತ್ವದ ತೀರ್ಪು ಪ್ರಕಟಿಸಿದ ಕೋಲ್ಕತ್ತಾ ಹೈಕೋರ್ಟ್

If salary enough, no maintenance for wife calcutta High Court

ಕೋಲ್ಕತ್ತಾ[ಜೂ.14]: ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ ಜೀವನ ನಿರ್ವಹಣೆ ಮಾಡುವಷ್ಟು ವೇತನ ಮಾಡುತ್ತಿದ್ದರೆ, ಆಕೆ ಗಂಡ ಜೀವನಾಂಶ ನೀಡಬೇಕಾಗಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಕೋಲ್ಕತ್ತಾ ಹೈಕೋರ್ಟ್ ವಿಚ್ಚೇದನ ಮನವಿ ಸಲ್ಲಿಸಿರುವ ಮಹಿಳೆಗೆ ಒಂದು ತಿಂಗಳ ನಿರ್ವಹಣೆ ಮಾಡುವಷ್ಟು ಸಂಬಳ ಸಿಗುತ್ತಿದ್ದರೆ, ಆಕೆ ಗಂಡನಿಂದ ನಿರ್ವಹಣೆಯ ಖರ್ಚನ್ನು ಕೇಳುವಂತಿಲ್ಲ ಎಂದಿದೆ. ಮಹಿಳೆಯ ಮಾಸಿಕ ವೇತನ ರೂ. 74 ಸಾವಿರಕ್ಕಿಂತ ಹೆಚ್ಚಿದ್ದರೆ ಹಾಗೂ ಅದರಿಂದ ಅಕೆ ಜೀವನ ನಿರ್ವಹಣೆ ಮಾಡಲು ಶಕ್ತವಾಗಿದ್ದರೆ ಗಂಡನಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ಬಿಸ್ವಜಿತ್‌ ಬಸು ತೀರ್ಪು ನೀಡಿದ್ದಾರೆ. 

ಮಾರ್ಚ್‌ 2016ರಲ್ಲಿ ವಿಚ್ಚೇದನ ಕೋರಿ ಮಹಿಳೆಯೊಬ್ಬಳು ವಿಚ್ಚೇದನಕ್ಕಾಗಿ ಟ್ರಯಲ್‌ ಕೋರ್ಟ್‌ ಮೆಟ್ಟಿಲೇರಿದ್ದಳು. ಈ ವೇಳೆ ತೀರ್ಪು ನೀಡಿದ್ದ ನ್ಯಾಯಾಲಯಪತಿ ತನ್ನ ಪತ್ನಿಗೆ ಮಾಸಿಕ 30 ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ತೀರ್ಪು ನೀಡಿತ್ತು. ಆದರೆ ಟ್ರಯಲ್ ಕೋರ್ಟ್ ನೀಡಿದ್ದ ಈ ತೀರ್ಪನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಳು.

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ತನ್ನ ಪತಿ ಒಂದು ವರ್ಷಕ್ಕೆ 83 ಲಕ್ಷ ರೂಪಾಯಿ ಸಂಪಾದಿಸುತ್ತಾನೆ. ಹೀಗಾಗಿ ತನ್ನ ತಿಂಗಳ ಖರ್ಚಿಗೆ 50 ಸಾವಿರ ರೂಪಾಯಿ ಜೀವನಾಂಶ ಆತ ನೀಡಬೇಕು. ಅಲ್ಲದೇ ಮನೆ ನಿರ್ವಹಣೆಗೆ 10 ಸಾವಿರ ರೂಪಾಯಿ, ಪಾಕೆಟ್‌ ಅಲಾವೆನ್ಸ್ ಎಂದು 4 ಸಾವಿರ ರೂಪಾಯಿ, ವೈಯಕ್ತಿಕ ಖರ್ಚಿಗಾಗಿ 22 ಸಾವಿರ ರೂಪಾಯಿ ಹಾಗೂ ಕೋರ್ಟ್‌ ಖರ್ಚಿಗೆ 14 ಸಾವಿರ ರೂಪಾಯಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಳು. 

ಆದರೆ ಮಹಿಳೆಯ ಮಾಸಿಕ ವೇತನವನ್ನು ಪರಿಶೀಲಿಸಿದಾಗ ಆಕೆ ತಿಂಗಳಿಗೆ 74 ಸಾವಿರ ರೂಪಾಯಿ ದುಡಿಯುತ್ತಿದ್ದಾಳೆ ಎಂದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್ ಈ ತೀರ್ಪು ನೀಡಿದೆ. 

Latest Videos
Follow Us:
Download App:
  • android
  • ios