ಮೇಟಿ ಬಳಿ ಇವರೆಗೂ ಮಾಹಿತಿ ಕೇಳಿಲ್ಲ, ಸಿ. ಡಿ ಇದೆ ಎನ್ನುತ್ತಿರುವ ರಾಜಶೇಖರ್ ಸಿಡಿ ಬಿಡುಗಡೆ ಮಾಡಲಿ. ಬಿಡುಗಡೆ ಮಾಡಿದ ಮರುಕ್ಷಣವೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಹೇಳಿದ್ದಾರೆ.
ಬೆಂಗಳೂರು (ಡಿ.12): ಮೇಟಿ ಬಳಿ ಇವರೆಗೂ ಮಾಹಿತಿ ಕೇಳಿಲ್ಲ, ಸಿ. ಡಿ ಇದೆ ಎನ್ನುತ್ತಿರುವ ರಾಜಶೇಖರ್ ಸಿಡಿ ಬಿಡುಗಡೆ ಮಾಡಲಿ. ಬಿಡುಗಡೆ ಮಾಡಿದ ಮರುಕ್ಷಣವೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಹೇಳಿದ್ದಾರೆ.
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಿಎಂ ಸಭೆ ಕರೆದಿದ್ದರು. ಸಭೆಯಲ್ಲಿ ಮೇಟಿ ಹಾಗೂ ಚಿಕ್ಕರಾಯಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.
ಮೇಟಿಗೆ ಸಂಬಂಧಿಸಿದಂತೆ ಸಿಡಿ ಬಿಡುಗಡೆ ಮಾಡಿದರೆ ಒಂದು ನಿಮಿಷವೂ ತಡ ಮಾಡದೇ ಕ್ರಮ ತೆಗೆದುಕೊಳ್ಳುತ್ತೇವೆ. ಇದು ನಮ್ಮ ನೈತಿಕತೆಯ ಪ್ರಶ್ನೆ ಎಂದು ಸಿಎಂ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಚಿವ ಹೆಚ್.ವೈ.ಮೇಟಿ ನನಗೆ ಯಾವುದೇ ವಿವರಣೆ ಕೊಟ್ಟಿಲ್ಲ. ಆದರೆ ಅದರಲ್ಲಿ ತಮ್ಮದೇನೂ ಪಾತ್ರ ಇಲ್ಲ ಅಂತಾ ಅವರು ಆಗಲೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಮೇಟಿಯವರ ಮೇಲೆ ಆರೋಪ ಮಾಡಿರುವ ರಾಜಶೇಖರ ತನ್ನ ಬಳಿ ಇದೆ ಎನ್ನಲಾದ ಸಿಡಿ ಬಿಡುಗಡೆ ಮಾಡಲಿ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಚಿಕ್ಕರಾಯಪ್ಪ ವಿಚಾರವಾಗಿ ಮಾತನಾಡಿ ಎಸಿಬಿಯಿಂದ ವಿವರಣೆ ಕೇಳಿಲ್ಲ. ಸಂಬಂಧಿಸಿದವರು ದಾಖಲೆ ಕಲೆ ಹಾಕುತ್ತಾರೆ. ಇದರಲ್ಲಿ ಮಧ್ಯ ಪ್ರವೇಶ ಮಾಡೋದಿಲ್ಲ ಸಿ.ಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಹೇಳಿದ್ದಾರೆ.
