ನವದೆಹಲಿ (ಫೆ.06):  ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ಮಂದಿರವನ್ನು ಭಾರತ ಅಥವಾ ಅಯೋಧ್ಯೆಯಲ್ಲಿ ನಿರ್ಮಾಣ ಮಾಡದಿದ್ದರೆ ಪಾಕಿಸ್ತಾನದಲ್ಲಿ ನಿರ್ಮಿಣ ಮಾಡಲಾಗುವುದು ಎಂದಿದ್ದಾರೆ.

 ಭಾರತ ಅಥವಾ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಯಾವಾಗ ನಿರ್ಮಿಸಲಾಗುವುದು ಎಂಬುದು ನಿಖರವಿಲ್ಲ. ಒಂದುವೇಳೆ ಮಂದಿರ ನಿರ್ಮಾಣ ಮಾಡದಿದ್ದರೆ ಪಾಕಿಸ್ತಾನದಲ್ಲಿ ಕಟ್ಟಲಾಗುವುದು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಮುಖಂಡ ವಿನಯ್ ಕಟಿಯಾರ್ ಕೂಡ ಇವರಿಗೆ ದನಿ ಸೇರಿಸಿದ್ದಾರೆ. ನಾವು ಕೂಡಾ ರಾಮಮಂದಿರ ನಿರ್ಮಾಣ ವಿಚಾರವನ್ನು ಎತ್ತಲಿದ್ದೇವೆ ಎಂದಿದ್ದಾರೆ.

ಸಂವಿಧಾನದಡಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು.