ಬೆಂಗಳೂರು (ಡಿ. 25): ಪುತ್ರ ಪ್ರೇಮವೇ ಹಾಗೆ, ಯಾರನ್ನು ಯಾವ ಹಂತಕ್ಕಾದರೂ ಒಯ್ದು ಬಿಡುತ್ತದೆ. ಪುತ್ರಿ ರೂಪಾ ಶಶಿಧರ್ ಅವರನ್ನು ಮಂತ್ರಿ ಮಾಡಬೇಕೆಂದು ದಿಲ್ಲಿ ನಾಯಕರ ಮನೆಗಳಿಗೆ ಎಡತಾಕುತ್ತಿದ್ದ ಮುನಿಯಪ್ಪನವರು ತನಗಿಂತ ವಯಸ್ಸಿನಲ್ಲಿ ರಾಜಕಾರಣದಲ್ಲಿ ಎಷ್ಟೋ ಕಿರಿಯರಾದ ದಿನೇಶ್ ಗುಂಡೂರಾವ್, ಡಿ ಕೆ ಶಿವಕುಮಾರ್, ಈಶ್ವರ ಖಂಡ್ರೆ ಅವರ ರೂಮ್‌ಗಳಿಗೆ ಹೋಗಿ ಮಗಳ ಪರವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು.

ನಾನೊಬ್ಬ ಮಿಸ್ಟೇಕನ್ ಐಡೆಂಟಿಟಿ: ನೋವು ಹೊರ ಹಾಕಿದ ಡಿಕೆಶಿ

‘ಖರ್ಗೆ ಮಗ ಮಂತ್ರಿ ಆಗಬಹುದಾದರೆ ನನ್ನ ಮಗಳು ಯಾಕೆ ಬೇಡ’ ಎನ್ನುವುದು ಮುನಿಯಪ್ಪನವರ ಸಿಂಪಲ್ ತರ್ಕ. ಈ ಬಗ್ಗೆ ಅದೇ ದಲಿತ ಎಡ ಕೋಟಾದಲ್ಲಿ ಮಂತ್ರಿ ಆಗಲು ಓಡಾಡುತ್ತಿದ್ದ ಮುನಿಯಪ್ಪನವರ ಒಂದು ಕಾಲದ ಶಿಷ್ಯ ಆರ್ ಬಿ ತಿಮ್ಮಾಪುರ ಅವರನ್ನು ಕೇಳಿದರೆ, ‘ಅಯ್ಯೋ ನಮ್ಮ ಸಾಹೇಬರಿಗೆ ಮಗಳ ಮುಂದೆ ಯಾರೂ ಕಾಣಂಗೇ ಇಲ್ಲ ರೀ... ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್ ಖರೇ ನೋಡ್ರಿ ..’ ಎನ್ನುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ