ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.  

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಲು ಬಯಸುವುದಿಲ್ಲ. ಅವರ ಮೊದಲ ಆದ್ಯತೆ ಸ್ವತಂತ್ರವಾಗುವುದು ಎಂದು ಈ ಹಿಂದೆ ಮುಷರಫ್ ಹೇಳಿದ್ದ ಹೇಳಿಕೆಯನ್ನೇ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. 

ಈಗ ಅದೇ ರೀತಿ ಹೇಳಿಕೆ ನೀಡಿದ ಮಾಜಿ ಸಚಿವರೂ ಹಾಗೂ ಕಾಂಗ್ರೆಸ್ ಮುಖಂಡರೂ ಆದ ಸೈಫುದ್ದಿನ್ ಕಾಶ್ಮೀರಿಗಳಿಗೆ ಅವಕಾಶ ಕೊಟ್ಟರೆ ಅವರು ಸ್ವತಂತ್ರರಾಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.

2007ರಲ್ಲಿ ಮುಷರಫ್ ಈ ಹೇಳಿಕೆ ನೀಡಿದ್ದರು. ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಇಸ್ಲಮಬಾದ್ ಶೃಂಗ ಸಭೆಗಾಗಿ ಭೇಟಿ ನೀಡಲು ನಿರ್ಣಯಿಸಿದ್ದ ವೇಳೆ ಇಂತಹ ಹೇಳಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ ಹಿರಿಯ ಮುಖಂಡ ಅಂತಹದ್ದೇ ಹೇಳಿಕೆ ನೀಡಿರುವುದು ವಿವಾದಕ್ಕೆ ಈಡಾಗಿದೆ.