ಪಟನಾ: 2019 ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ದೇಶಾದ್ಯಂತ ಕೃಷಿ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡಿ ದ್ದಾರೆ. ಅಲ್ಲದೆ, ಆಹಾರ ಸಂಸ್ಕರಣೆ ಉದ್ಯಮಗಳಿಗೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
 
ಇಲ್ಲಿ ವಿಪಕ್ಷಗಳ ರ್ಯಾಲಿಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ರಾಹುಲ್, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟರಿಗೆ ಕೋಟ್ಯಂತರ ರು. ನೀಡುತ್ತದೆ. 

ಆದರೆ, ದೇಶದ ಬಡ ರೈತರಿಗೆ ದಿನಕ್ಕೆ 17 ರು. ನೀಡುವುದಾಗಿ ಘೋಷಣೆ ಮಾಡುತ್ತದೆ,’ ಎಂದು ರಾಹುಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.