ನವದೆಹಲಿ : ದೇಶದಲ್ಲಿ 2019ನೇ ಸಾಲಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ಆರಂಭಿಸಿವೆ.  ಅಭ್ಯರ್ಥಿ ಆಯ್ಕೆ ಸೇರಿದಂತೆ ಅಧಿಕಾರಕ್ಕೆ ಏರಲು ಸಾಕಷ್ಟು ತಯಾರಿಯಲ್ಲಿ ತೊಡಗಿವೆ. 

ಪ್ರಸ್ತುತ ರಾಮಮಂದಿರ ವಿಚಾರವೂ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದು,   ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕಾನೂನು ರೂಪಿಸಿದಲ್ಲಿ  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಖಚಿತ ಎಂದು VHP ಮುಖಂಡ ವಿ.ಎಸ್ ಕೋಕ್ಜೆ ಅಭಿಪ್ರಾಯಪಟ್ಟಿದ್ದಾರೆ. 

ಕೇಂದ್ರ ಸರ್ಕಾರದಿಂದ ಕಾನೂನು ರೂಪಿಸಿದಲ್ಲಿ ಸುಲಭವಾಗಿ ಗೆಲುವು ಪಡೆಯಲಿದೆ. 2019ರಲ್ಲಿ ಇದರಿಂದ ಮತ್ತೆ ಅಧಿಕಾರ ಗದ್ದೆಗೆ ಏರಲಿದೆ. ಆದರೆ ಕಾನೂನು ರೂಪಿಸಿದಲ್ಲಿ ನ್ಯಾಯಾಲಯದಲ್ಲಿ ಸವಾಲು ಎದುರಿಸಬೇಕಾಗುತ್ತದೆ ಎನ್ನುವ ಭಯ ಕೇಂದ್ರಕ್ಕೆ ಕಾಡುತ್ತಿದೆ  ಎಂದಿದ್ದಾರೆ. 

ಈಗಾಗಲೇ ನ್ಯಾಯಧೀಶರು ಅಲಭ್ಯ ಇರುವುದರಿಂದ .29ರಂದು ನಡೆಯಬೇಕಿದ್ದ ಅಯೋಧ್ಯೆಯ ರಾಮಂದಿರ ಕೇಸ್ ವಿಚಾರಣೆಯನ್ನು ಮುಂದೂಡಲಾಗಿದೆ. 

ಸುಪ್ರೀಂಕೋರ್ಟ್ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುವ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದು, ಈ ವಿಚಾರಕ್ಕೆ ಪ್ರಾಶಸ್ತ್ಯ ನೀಡುತ್ತಿಲ್ಲ.  ನವೆಂಬರ್ ನಲ್ಲಿಯೇ ನಡೆಯಬೇಕಾದ ವಿಚಾರಣೆಯನ್ನು ಇಲ್ಲಿಯವರೆಗೂ ಮುಂದೂಡಿದ್ದು, ಇನ್ನಾದರೂ ಮುಹೂರ್ತ ಕೂಡಿಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಲು ಈಗಾಗಲೇ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ  ರಂಜನ್ ಗೊಗೋಯ್ ನೇತೃತ್ವದಲ್ಲಿ ನ್ಯಾ. ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್, ನ್ಯಾ, ಎಸ್ ಬೋಬ್ಡೆ, ಡಿ.ವೈ. ಚಂದ್ರಚೂಢ ಅವರನ್ನೊಳಗೊಂಡ ಪೀಠ ರಚಿಸಿದೆ. ಆದರೆ ನ್ಯಾ. ಬೋಬ್ಡೆ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ವಿಚಾರಣೆ ಮುಂದೂಡಿದೆ.