Asianet Suvarna News Asianet Suvarna News

'ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ'!

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದೂ ಪಾಕಿಸ್ತಾನವಾಗುತ್ತೆ

ಕಾಂಗ್ರೆಸ್ ನಾಯಕ ಶಶಿ ತರೂರ್ ಗಂಭೀರ ಎಚ್ಚರಿಕೆ

ಬಿಜೆಪಿಯಿಂದ ಅಲ್ಪಸಂಖ್ಯಾತರ ಹಕ್ಕು ಮೊಟಕುಗೊಳಿಸುವ ಹುನ್ನಾರ

ಸಂವಿಧಾನ ಬದಲಾವಣೆಗೆ ಮುಂದಾಗುತ್ತಾ ಬಿಜೆಪಿ?

ಜಾತ್ಯಾತೀತ ಶಕ್ತಿಗಳ ಒಗ್ಗೂಡಿಕೆಗೆ ತರೂರ್ ಕರೆ

If BJP Wins In 2019, India Will Become "Hindu Pakistan": Shashi Tharoor
Author
Bengaluru, First Published Jul 12, 2018, 3:53 PM IST

ತಿರುವನಂತಪುರಂ(ಜು.12): 2019 ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದರೆ ಭಾರತ ಹಿಂದೂ ಪಾಕಸಿ್ತಾನವಾಗಲಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಎಚ್ಚರಿಸಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಧರ್ಮಗಳ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಪಸಂಖ್ಯಾತ ಹಿಂದೂಗಳ ಹಕ್ಕನ್ನು ಪಾಕಿಸ್ತಾನ ಗೌರವಿಸುವುದಿಲ್ಲ ಅದೇ ರೀತಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಅಲ್ಪಸಮಖ್ಯಾತರ ಹಕ್ಕುಳಿಗೆ ಚ್ಯುತಿ ಬರಲಿದೆ ಎಂಬುದು ಶಶಿ ತರೂರ್ ವಾದವಾಗಿದೆ. ಮತ್ತೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ದೇಶದ ಸಂವಿಧಾನದಲ್ಲಿ ಬದಲಾವಣೆ ತಂದು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂದು ತರೂರ್ ಗಂಭೀರ ಆರೋಪ ಮಾಡಿದ್ದಾರೆ.

ಸಂವಿಧಾನದ ಮೂಲ ಆಶಯಗಳನ್ನು ಬದಿಗೊತ್ತಿ ಭಾರತವನ್ನು ಉನ್ಮತ್ತ ಮತ್ತು ಅಸಹಿಷ್ಣು ಹಿಂದೂ ರಾಷ್ಟವನ್ನಾಗಿ ಪರಿವರ್ತಿಸುವ ಬಿಜೆಪಿ ಹುನ್ನಾರವನ್ನು ನಾವೆಲ್ಲಾ ಅರಿಯಬೇಕಿದೆ ಎಂದು ತರೂರ್ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಹೋರಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದು, ರಾಜಕೀಯ ಪಕ್ಷಗಳು ಈ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಬಾಯ್ ಪಟೇಲ್, ಮೌಲಾನಾ ಆಜಾದ್ ಅವರಂತಹ ಮಹಾನ್ ನಾಯಕರ ಆಶಯದಂತಿರುವುದಿಲ್ಲ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios