ಇಸ್ಲಾಮಾಬಾದ್(ಜು.16): ಗೂಢಚಾರ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಕುರಿತು ನಾಳೆ(ಜು.17) ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಗೂಢಚಾರಿಕೆ ಆರೋಪದ ಮೇಲೆ ಕುಲಭೂಷಣ್ ಅವರನ್ನು ಪಾಕಿಸ್ತಾನ ಸೇನಾ ನ್ಯಾಯಾಲಯ 2017ರಲ್ಲಿ ಕುಲಭೂಷಣ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಈ ನಡೆಯನ್ನು ಭಾರತ ಐಸಿಜೆಯಲ್ಲಿ ಪ್ರಶ್ನಿಸಿತ್ತು.

2016ರ ಮಾರ್ಚ್ 3, ರಂದು ಕುಲಭೂಷಣ್ ಅವರನ್ನು ಇರಾನ್ ಗಡಿ ಬಳಿ ಬಂಧಿಸಿದ ಮೇಲೆ ಅನೇಕ ಬೆಳವಣಿಗೆಗಳು ನಡೆದಿದ್ದು, ಕುಲಭೂಷಣ್ ಸುರಕ್ಷಿತವಾಗಿ ಮರಳಲಿ ಎಂದು ಪ್ರತಿಯೊಬ್ಬ ಭಾರತೀಯ ಪ್ರಾರ್ಥಿಸುತ್ತಿದ್ದಾನೆ.

ಕುಲಭೂಷಣ್ ಪ್ರಕರಣದತ್ತ ಗಮನ ಹರಿಸುವುದಾದರೆ...

ಮಾರ್ಚ್ 3, 2016-ಗೂಢಚಾರ ಆರೋಪದ ಮೇಲೆ ಕುಲಭೂಷಣ್ ಬಂಧನ
ಮಾರ್ಚ್ 24, 2016-ಕುಲಭೂಷಣ್ ಭಾರತದ ರಾ ಅಧಿಕಾರಿ ಎಂದ ಪಾಕ್ 
ಮಾರ್ಚ್ 26, 2016-ಪಾಕ್ ಆರೋಪಕ್ಕೆ ಭಾರತದಿಂದ ತೀವ್ರ ವಿರೋಧ
ಮಾರ್ಚ್ 29, 2016-ಭಾರತೀಯ ಹೈಕಮಿಷನರ್’ರಿಂದ ಕುಲಭೂಷಣ್ ಭೇಟಿ ಯತ್ನ
ಏಪ್ರಿಲ್ 2, 2016-ಜಾಧವ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿದ ಪಾಕ್
ಏಪ್ರಿಲ್ 10, 2017- ಪಾಕ್ ಸೇನಾ ನ್ಯಾಯಾಲಯದಿಂದ ಕುಲಭೂಷಣ್’ಗೆ ಗಲ್ಲುಶಿಕ್ಷೆ ಪ್ರಕಟ

ಏಪ್ರಿಲ್ 11, 2017- ಪಾಕ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಸುಷ್ಮಾ ಸ್ವರಾಜ್ ಘೋಷಣೆ
ಏಪ್ರಿಲ್ 17, 2017- ಜಾಧವ್ ಕುಟುಂಬಕ್ಕೆ ಭೇಟಿಗೆ ಅವಕಾಶ ಕೋರಿ ಸುಷ್ಮಾ ಸ್ವರಾಜ್ ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್’ಗೆ ಪತ್ರ
ಮೇ 8, 2017- ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿದ ಭಾರತ
ಮೇ 18, 2017- ಜಾಧವ್ ಮರಣದಂಡನೆ ಆದೇಶಕ್ಕೆ ತಡೆ ನೀಡಿದ ಐಸಿಜೆ
ಡಿಸೆಂಬರ್ 25, 2017- ಇಸ್ಲಾಮಾಬಾದ್’ನಲ್ಲಿ ಜಾಧವ್ ಅವರನ್ನು ಭೆಟಿಯಾದ ಪತ್ನಿ ಮತ್ತು ತಾಯಿ
ಫೆ. 18, 2019- ಜಧವ್ ತೀರ್ಪು ಕಾಯ್ದಿರಿಸಿದ ಐಸಿಜೆ
ಜು. 17, 2019- ಜಾಧವ್ ಕುರಿತಾದ ಐಸಿಜೆ ತೀರ್ಪು  ಪ್ರಕಟವಾಗಲಿದೆ.