ಪಾಕಿಸ್ತಾನ ಮಿಲಿಟರಿ ಕೋರ್ಟ್'ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ  ಭಾರತೀಯ ನೌಕಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಭವಿಷ್ಯ ಇವತ್ತು ನಿರ್ಧಾರವಾಗಲಿದೆ. ಎಲ್ಲರ ಚಿತ್ತ ಈಗ ಅಂತರಾಷ್ಟ್ರೀಯ ನ್ಯಾಯಾಲಯದತ್ತ ನೆಟ್ಟಿದೆ.

ನವದೆಹಲಿ(ಮೇ.18): ಪಾಕಿಸ್ತಾನ ಮಿಲಿಟರಿ ಕೋರ್ಟ್'ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಭವಿಷ್ಯ ಇವತ್ತು ನಿರ್ಧಾರವಾಗಲಿದೆ. ಎಲ್ಲರ ಚಿತ್ತ ಈಗ ಅಂತರಾಷ್ಟ್ರೀಯ ನ್ಯಾಯಾಲಯದತ್ತ ನೆಟ್ಟಿದೆ.

ಇವತ್ತು ಕುಲಭೂಷಣ್ ಭವಿಷ್ಯ ನಿರ್ಧಾರ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್​ ಜಾಧವ್​ ಅವರನ್ನು ಅಪಹರಿಸಿ ಬಂಧಿಸಿದ್ದ ಪಾಕಿಸ್ತಾನ, ಬೇಹುಗಾರಿಕೆ ಆರೋಪ ಹೋರಿಸಿ ಮಿಲಿಟರಿ ಕೋರ್ಟ್​ ಮೂಲಕ ಮರಣದಂಡನೆ ವಿಧಿಸಿತ್ತು. ಈ ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯ 3ದಿನಗಳ ಕಾಲ ಭಾರತ ಮತ್ತು ಪಾಕಿಸ್ತಾನದ ವಾದಗಳನ್ನು ಆಲಿಸಿತ್ತು. ಇವತ್ತು ಅಂತರಾಷ್ಟ್ರೀಯ ನ್ಯಾಯಾಲಯ ಈ ಸಂಬಂಧ ತೀರ್ಪು ನೀಡಲಿದೆ. ಮಧ್ಯಾಹ್ನ 3.30 ವೇಳೆಗೆ ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹೊರಬರಲಿದೆ.

ವಾದ ಮಂಡನೆ ವೇಳೆ ಭಾರತ, ಜಾಧವ್ ಮರಣ ದಂಡನೆಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ಐಸಿಜೆಯನ್ನು ಮನವಿ ಮಾಡಿತ್ತು. ತೀರ್ಪು ವಿಳಂಬವಾದಲ್ಲಿ ತೀರ್ಪಿಗೂ ಮೊದಲೇ ಪಾಕಿಸ್ತಾನ ಜಾಧವ್ ಅವರನ್ನು ಗಲ್ಲಿಗೇರಿಸಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು.ಭಾರತದ ಮನವಿ ಮೇರೆಗೆ ಐಸಿಜೆ ಬೇಗನೆ ವಿಚಾರಣೆ ಆರಂಭಿಸಿತ್ತು.

ಅಂತರಾಷ್ಟ್ರೀಯ ನ್ಯಾಯಾಲಯದತ್ತ ಎಲ್ಲರ ಚಿತ್ತ

ಜಾಧವ್ ಪ್ರಕರಣವನ್ನು ಮಾರ್ಚ್​ 8ರಂದು ಭಾರತ ಅಂತಾರಾಷ್ಟೀಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಪಾಕಿಸ್ತಾನ ವಿಯೆನ್ನಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಏಕಪಕ್ಷೀಯ ವಿಚಾರಣೆ ನಡೆಸಿ ಜಾಧವ್ ಗಲ್ಲುಶಿಕ್ಷೆ ವಿಧಿಸಿದೆ ಎಂದು ಭಾರತ ಆರೋಪಿಸಿತ್ತು.

ಪಾಕಿಸ್ತಾನ’ ಬೇಹುಗಾರಿಕೆಯಲ್ಲಿ ತೊಡಗಿದ ವ್ಯಕ್ತಿಗೆ ವಿಯೆನ್ನಾ ಶಿಷ್ಟಾಚಾರ ಅಸ್ವಯಿಸುವುದಿಲ್ಲ ಎಂದು ಪ್ರತಿವಾದ ಮಂಡಿಸಿತ್ತು. ಭಾರತ ಅಂತರಾಷ್ಟೀಯ ನ್ಯಾಯಾಲಯವನ್ನು ರಾಜಕೀಯ ನಾಟಕದ ವೇದಿಕೆಯಾಗಿ ಪರಿವರ್ತಿಸಿದೆ ಎಂದು ಅದು ದೂರಿತ್ತು.18 ವರ್ಷಗಳ ಬಳಿಕ ಎರಡೂ ನೆರೆಯ ದೇಶಗಳು ಅಂತರಾಷ್ಟೀಯ ನ್ಯಾಯಾಲಯದಲ್ಲಿ ಮತ್ತೆ ಮುಖಾಮುಖಿಯಾಗಿವೆ.