ಮಲ್ಯ ಐಸಿಐಸಿಐ ಬ್ಯಾಂಕ್ ನೂತನ ಅಧ್ಯಕ್ಷ..?

ICICI Bank may appoint MD Mallya as its new chairman
Highlights

ಐಸಿಐಸಿಐ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಂ.ಡಿ ಮಲ್ಯ ಅವರನ್ನು ನೇಮಕ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. 

ಮುಂಬೈ :  ಭಾರತದ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ 2ನೇ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡ ಐಸಿಐಸಿಐ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಂ.ಡಿ ಮಲ್ಯ ಅವರನ್ನು ನೇಮಕ ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ.

ನೂತನ ಅಧ್ಯಕ್ಷರ ನೇಮಕಾತಿಗೆ ಈಗಾಗಲೇ ಬ್ಯಾಂಕ್ ಆರ್ ಬಿಐ ನಿಂದ ಅನುಮತಿಯನ್ನು ಕೇಳಿದೆ.  ಬ್ಯಾಂಕ್ ಆಡಳಿತ ಮಂಡಳಿಯು ಈ ಸಂಬಂಧ ಚರ್ಚೆ ನಡೆಸಿದೆ. ನೂತನ ಅಧ್ಯಕ್ಷರ ನೇಮಕಾತಿ  ಆರ್‌ಬಿಐಗೆ ಪ್ರಸ್ತಾವನೆಯನ್ನು ಕಳುಹಿಸಿದೆ. ಮುಂದಿನ ಕಾರ್ಯವು ಆರ್ಬಿಐ ನಿರ್ಧಾರದ ಮೇಲೆ ಅವಲಂಭಿತವಾಗಿರಲಿದೆ. 

ಎಂ.ಡಿ ಮಲ್ಯ ಅವರು ಐಸಿಐಸಿಐ ಬ್ಯಾಂಕ್ ಸೇರ್ಪಡೆಗೊಳ್ಳುವ ಮುನ್ನ  ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.  

ಐಸಿಐಸಿಐ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದ ಆರೋಪದ ಮೇಲೆ ಅಧ್ಯಕ್ಷೆಯಾಗಿದ್ದ ಚಂದಾ ಕೊಚ್ಚಾರ್  ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಲಾಗಿದೆ. ವಿಚಾರಣೆ ಮುಕ್ತಾಯವವಾಗುವರೆಗೂ ಕೂಡ ಅವರು ರಜೆಯಲ್ಲಿ ಇರಲಿದ್ದಾರೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ನೇಮಕಾತಿಗೆ ಬ್ಯಾಂಕ್ ಆಡಳಿತ ಮಂಡಳಿಯಿಂದ ತೀರ್ಮಾನ ಮಾಡಲಾಗಿದೆ. 

loader