ಇಡೀ ಕನ್ನಡ ನಾಡು ಹೆಮ್ಮೆ ಪಡುವ ಕಾಲ! ನೌಕಾಪಡೆಯ ರಿಯರ್ ಅಡ್ಮಿರಲ್ ಹುದ್ದೆಗೆ ಕನ್ನಡಿಗ! ಉನ್ನತ ಹುದ್ದೆಗೇರಿದ ಕೊಡಗಿನ ಐಬಿ ಉತ್ತಯ್ಯ! ಭೂಸೇನೆಯ ಮೇಜರ್ ಜನರಲ್ ಹುದ್ದೆಗೆ ಸಮ 

ಬೆಂಗಳೂರು(ಆ.3): ಇದು ಇಡೀ ಕರ್ನಾಟಕದ ಜನತೆ ಹೆಮ್ಮೆ ಪಡುವ ಸುದ್ದಿ. ಕೊಡಗಿನ ಐಬಿ ಉತ್ತಯ್ಯ ಅವರು ನೌಕಾಪಡೆಯ ರಿಯರ್ ಅಡ್ಮಿರಲ್ ಹುದ್ದೆ ಅಲಂಕರಿಸಿದ್ದಾರೆ. ಉತ್ತಯ್ಯ ಈ ಸ್ಥಾನಕ್ಕೇರುತ್ತಿರುವ ಕೊಡಗು ಜಿಲ್ಲೆಯ ಪ್ರಥಮ ವ್ಯಕ್ತಿ ಎನ್ನುವುದು ಗಮನಾರ್ಹ.

ಕೊಡಗಿನ ಮಕ್ಕಂದೂರಿನವರಾದ ಉತ್ತಯ್ಯ, ದಿ. ಬೆಳ್ಯಪ್ಪ ಅವರ ಪುತ್ರ. ರಿಯರ್ ಅಡ್ಮಿರಲ್ ಎನ್ನುವುದು ಭೂಸೇನೆಯಲ್ಲಿ ಮೇಜರ್‌ ಜನರಲ್‌ ಹುದ್ದೆಗೆ ಸರಿಸಮನಾದ ಹುದ್ದೆಯಾಗಿದೆ. 

1984 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಉತ್ತಯ್ಯ, ಬಿ.ಟೆಕ್‌, ಎಂ.ಟೆಕ್‌ ಹಾಗೂ ಎಂ.ಫಿಲ್‌ ಪದವೀಧರರು. ಇದಕ್ಕೂ ಮುನ್ನ ನೌಕಾಪಡೆಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಇವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಉತ್ತಯ್ಯ ದೆಹಲಿಯಲ್ಲಿ ನೆಲೆಯಾಗಿದ್ದರೆ ಅವರ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ.