ಉದಾರತೆ ಮೆರೆದ IAS-IPS ಮುಸ್ಲಿಂ ದಂಪತಿಹುತಾತ್ಮ ಯೋಧನ ಮಗಳ ವಿದ್ಯಾಭ್ಯಾಸದ ಹೊಣೆ ಹೊತ್ತ ದಂಪತಿಯೂನಸ್ ಖಾನ್ ಮತ್ತು ಅಂಜುಮ್‌ ಅರಾ IAS-IPS  ದಂಪತಿಹುತಾತ್ಮ ಯೋಧ ಪರಮ್​ಜಿತ್ ಸಿಂಗ್ ಮಗಳು ಕುಶ್‌ದೀಪ್ ಕೌರ್7 ನೇ ತರಗತಿ ಓದುತ್ತಿರೋ ಕುಶ್‌ದೀಪ್ ಕೌರ್

ಕೆಲದಿನಗಳ ಹಿಂದೆ ಯೋಧ ಪರಮ್‌ಜಿತ್ ಸಿಂಗ್ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈಗ ಅವರ 12 ವರ್ಷದ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹಿಮಾಚಲಪ್ರದೇಶದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಾಗಿರುವ ದಂಪತಿ ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಎಎಸ್ ಅಧಿಕಾರಿ ಯೂನಸ್ ಖಾನ್ ಮತ್ತು ಅವರ ಪತ್ನಿ, ಐಪಿಎಸ್ ಅಧಿಕಾರಿ ಅಂಜುಮ್‌ ಅರಾ ಅವರೇ ಈ ಘೋಷಣೆ ಮಾಡಿದ ದಂಪತಿ. ಹುತಾತ್ಮ ಯೋಧನ ಮಗಳು ಶಿಕ್ಷಣ ಪೂರೈಸಿ ಸ್ವಂತ ದುಡಿಮೆ ಮಾಡಿ ಜೀವನ ಸಾಗಿಸಲು ಸಮರ್ಥಳಾಗುವವರೆಗೆ ಆಕೆಯ ಎಲ್ಲ ಜವಾಬ್ದಾರಿಯನ್ನು ತಾವೂ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹುತಾತ್ಮ ಯೋಧ ಪರಮ್‌ಜಿತ್ ಸಿಂಗ್ ಪತ್ನಿ ಬಳಿಯೂ ಮಾತನಾಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಸದ್ಯ ಮಗಳು ಕುಶ್‌ದೀಪ್ ಕೌರ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ.